ಹಲೋ ದೊಡ್ಡ ಮನೇಲಿ ಇದ್ದೇನೆ. ಕಾರ್ಯಕ್ರಮ ಇದೆ. ಎಲ್ಲರೂ ಸೇರಿದ್ದಾರೆ. ಬರುವಾಗ ತಡ ಆಗುತ್ತೆ ಹೀಗಂದ ಜಯಂತ ಪೋನಿಟ್ಟು ಕೆಲಸದಲ್ಲಿ ಮುಳುಗಿದ. ಎಲ್ಲರೂ ವರ್ಷಕೊಮ್ಮೆ ಅಲ್ಲಿ ಸೇರಿ ಕಾರ್ಯಕ್ರಮ ಮುಗಿಸಿ ಮತ್ತೆ ತಮ್ಮ ಮನೆಯ ಕಡೆಗೆ ನಡೆಯುತ್ತಾರೆ. ಎಲ್ಲರ ಬಾಯಲ್ಲೂ ದೊಡ್ಡ ಮನೆ ನಲಿದಾಡುತ್ತದೆ. ಕಾರಣವಿಷ್ಟೆ ಅವರೆಲ್ಲರೂ ಅಲ್ಲಿ ನಲಿದಾಡಿ ಆಡಿ ಬೆಳೆದವರು. ಎಲ್ಲರೂ ಗಟ್ಟಿ ಮನೆಯೊಳಗೆ ಭದ್ರವಾಗಿದ್ದಾರೆ. ದೊಡ್ಡ ಮನೆಯ ಗೋಡೆಗಳು ಬೀಳುವ ಹಂತ ತಲುಪಿದೆ. ಮಳೆ ನೀರು ಮನೆಯೊಳಕ್ಕೆ ಹನಿಯುತ್ತದೆ. ಮನೆ ಹೆಸರಿಗಷ್ಟೇ ಉಳಿದುಕೊಂಡಿದೆ. ಯಾರಿಗೂ ದೊಡ್ಡ ಮನೆಯನ್ನ ಗಟ್ಟಿಯಾಗಿಸುವ ಮನಸ್ಸಿಲ್ಲ, ಎಲ್ಲರೂ ಗಟ್ಟಿಯಾಗುತ್ತಿದ್ದಾರೆ, ಮನೆ ಶಿಥಿಲವಾಗುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!