ಬಿಟ್ಟು ಹೊರಡಲೇಬೇಕು. ಇದು ಬದುಕಿನ ನಿರ್ಧಾರ. ನಾನು ಒಪ್ಪಿಕೊಂಡಾಗಿದೆ. ಊರು ಬಿಟ್ಟು ದೊಡ್ಡ ಶಹರದೊಳಗೆ ಬದುಕು ಕಟ್ಟಿಕೊಳ್ಳುತ್ತೇನೆಂದು. ಸಣ್ಣ ನಾಲ್ಕು ಗೋಡೆಗಳು ಒಂದಕ್ಕೊಂದು ಸೇರಿರುವ ಸಣ್ಣ ಕೊಠಡಿಯೊಳಗೆ ನಿದ್ದೆ ಓದು ಊಟ ತಿಂಡಿ ಎಲ್ಲವೂ ನಡೆಯುತ್ತದೆ. ಕೆಲಸ ರೂಮು ಇದೆ ಜೀವನವಾಗಿಬಿಟ್ಟಿದೆ. ಹಬ್ಬಕ್ಕೆ ಒಂದು ಸಲ ಮನೆಗೆ ತೆರಳಿ ಸುತ್ತಮುತ್ತ ಓಡಾಡಿ ಕಣ್ಣು ತಂಪು ಮಾಡಿಕೊಂಡು ಬೇಕಾದಷ್ಟು ಆಮ್ಲಜನಕವನ್ನು ಪಡೆದುಕೊಂಡು ಗಟ್ಟಿಯಾಗಿ ಎಲ್ಲ ನೆನಪುಗಳನ್ನು ಹೊತ್ತು ಶಹರದೊಳಗೆ ಬದುಕು ಆರಂಭವಾಗುತ್ತದೆ. ಮತ್ತೆ ಮನೆಯ ಕಡೆಗೆ ಹೋಗುವ ಯೋಚನೆ ಕಾಡುತ್ತದೆ. ಎಲ್ಲಾ ಆಸೆಗಳನ್ನು ಕಟ್ಟಿಹಾಕಿ ಮನೆಯವರ ನೆಮ್ಮದಿಗಾಗಿ ಈ ಶಹರದೊಳಗೆ ಉಸಿರಾಡಲೇಬೇಕು. ಈಗ ಬೆಳಗ್ಗೆ ಬಸ್ಸಿನಿಂದಿಳಿದು ಈ ಬೆಂಗಳೂರೆಂಬ ಶಹರವನ್ನು ಗಮನಿಸುತ್ತಿದ್ದೇನೆ, ನನ್ನ ಹಾಗೆ ಲಕ್ಷಾಂತರ ಜನ ಬಂದಿಳಿಯುತ್ತಿದ್ದಾರೆ ಶಹರ ಸ್ವಾಗತಿಸುತ್ತಿದೆ ಊರಿನ ಉಸಿರಾಟ ಇಲ್ಲಿಗೂ ಕೇಳುವಂತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!