ಮೂರು ಚಕ್ರದ ರಿಕ್ಷಾ ಪೇಟೆಯಿಂದ ಮನೆಯ ಕಡೆಗೆ ಓಡ್ತಾ ಇತ್ತು. ಜೋರು ಮಳೆ ಇದ್ದ ಕಾರಣ ತುರ್ತಾಗಿ ಮನೆಗೆ ತಲುಪಬೇಕಾದ ಅವಶ್ಯಕತೆ ಇದ್ದ ಕಾರಣ ಆಟವನ್ನು ಏರಿದ್ದೆ. ಅದು ನನ್ನ ಬದುಕಿಗೆ ದಾರಿ ದೀಪ ಆಗತ್ತೆ ಅಂತ ಅಂದುಕೊಂಡಿರಲಿಲ್ಲ. ಅವತ್ತು ಓಡಿಸ್ತಾ ಇದ್ದಂತಹ ನಾರಾಯಣಜ್ಜ ಮಾತಾಡ್ತಾ ಹೋದ್ರು ಅವರಿಗೆ ಆಟೋ ಓಡಿಸುವುದಕ್ಕೆ ಇಷ್ಟ ಇರಲಿಲ್ಲ ಏನಾದ್ರೂ ಕೆಲಸ ಮಾಡಬೇಕು ಅಂತ ಅಂದುಕೊಂಡಿದ್ದರು ,ಆದರೆ ಬದುಕಿನ ಅನಿವಾರ್ಯತೆ ಮನೆಯವರ ನೆಮ್ಮದಿ ಮತ್ತು ಖುಷಿ ಜೊತೆಗೆ ಜವಾಬ್ದಾರಿಯಿದ್ದ ಕಾರಣ ಆಟೋ ಕೈ ಹಿಡಿಯಿತು. ಅದಾದ ನಂತರ ಅದರ ಜೊತೆಗೆ ಬೇರೆ ಕೆಲಸವನ್ನು ಮಾಡುತ್ತಾ ಹೋದ್ರು. ಇದೆಲ್ಲ ಸಾಧ್ಯ ಆಗಿರೋದು ಕಾರಣ ಜೊತೆಯಿದ್ದಕ್ಕೆ. ಹಾಗಾಗಿ ಪ್ರತಿಯೊಬ್ಬರೂ ಬದುಕಿಗೊಂದು ಕಾರಣವನ್ನು ಹುಡುಕಿಕೊಡಬೇಕು. ಆ ಕಾರಣವನ್ನ ಗಟ್ಟಿಯಾಗಿ ನಂಬಿಕೊಳ್ಳಬೇಕು ನಾಳೆ ಅದ್ಬುತವಾಗಿರುತ್ತೆ ಹಾಗಾಗಿ ನಿನ್ನ ಬದುಕು ಇನ್ನಷ್ಟು ಸುಂದರವಾಗಿರುತ್ತೆ ಮೊದಲು ಕಾರಣವನ್ನ ಹುಡುಕುವ ಕೆಲಸ ಮಾಡು. ಅವರ ಮಾತು ಕೇಳಿದಾಗ ಮನೆ ಬಂದಿತ್ತು ಮನೆ ಒಳಗೆ ಚಲಿಸಿಬಿಟ್ಟೆ ಅವರ ಮಾತುಗಳು ನನ್ನೊಂದಿಗೆ ಚಲಿಸುವುದ್ದಕ್ಕೆ ಆರಂಭ ಮಾಡಿದವು. ಅವರ ಮಾತಿನ ಕಂಪನ ಮಾಯವಾಗುವ ಮೊದಲು ಅದನ್ನ ಮನಸ್ಸು ಒಳಗೆ ಗಟ್ಟಿಯಾಗಿಟ್ಟುಕೊಂಡುಬಿಟ್ಟೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!