ಚಿಕ್ಕಮಗಳೂರು ಜಯಕುಮಾರ್ ಅವರ "ಜಿಲ್ಲಾ ವರದಿಗಾರ ಜಯಮಿತ್ರ"

ಚಿಕ್ಕಮಗಳೂರಿನ ಹಿರಿಯ ಪತ್ರಕರ್ತರಾದ ಕೆ. ಜಯಕುಮಾರ್ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿ ನಡೆಸಿಕೊಂಡು ಬರುತ್ತಿರುವ ಬೆಳಗ್ಗಿನ ದಿನಪತ್ರಿಕೆಯಾಗಿದೆ "ಜಿಲ್ಲಾ ವರದಿಗಾರ ಜಯಮಿತ್ರ". ಚಿಕ್ಕಮಗಳೂರು ಸ್ಪೆನ್ಸರ್ಸ್ ರಸ್ತೆಯ ಎಲ್ ಐ ಸಿ ಕಚೇರಿ ಬಳಿಯಿರುವ ಜಯಮಿತ್ರ ಆಫ್ ಸೆಟ್ ಪ್ರಿಂಟರ್ಸ್ & ಟ್ರೇಡರ್ಸ್ ನಲ್ಲಿ ಮುದ್ರಣವಾಗುತ್ತಿರುವ ಪತ್ರಿಕೆ ಕಳೆದ ೧೬ ವರ್ಷಗಳಿಂದ ಪ್ರಕಟವಾಗುತ್ತಿದೆ. ಕೆಸವಳಲು ರಾಘವೇಂದ್ರ ಅವರು ಉಪ ಸಂಪಾದಕರು.

ಆರು ಪುಟಗಳಲ್ಲಿ ಬರುವ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಒಂದು ರೂಪಾಯಿ. ಚಿಕ್ಕಮಗಳೂರು ಮಾತ್ರವಲ್ಲದೆ, ಹಾಸನ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ವಿಜಯನಗರ, ಬಳ್ಳಾರಿ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಸಾರ ಹೊಂದಿದೆ. ವಿವಿಧ ಜಿಲ್ಲೆಗಳ ಮತ್ತು ರಾಜ್ಯ ಮಟ್ಟದ ಸುದ್ಧಿಗಳು ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ.

~ ಶ್ರೀರಾಮ ದಿವಾಣ