ಶ್ರೀರಾಮ ದಿವಾಣರ ಸಂಪಾದಕತ್ವದಲ್ಲಿ ಉಡುಪಿಯಿಂದ ಪ್ರಕಟವಾಗುತ್ತಿದ್ದ “ಕ್ರೈಂ ರಿಪೋರ್ಟರ್”
ಉಡುಪಿಯಿಂದ ೨೦೦೨ ಮತ್ತು ೨೦೦೩ರ ಅವಧಿಯಲ್ಲಿ ಒಂದೂವರೆ ವರ್ಷ ಕಾಲ ಪ್ರಕಟಗೊಂಡ ಪಾಕ್ಷಿಕ ಪತ್ರಿಕೆಯಾಗಿದೆ "ಕ್ರೈಂ ರಿಪೋರ್ಟರ್". ೨೦೦೨ರ ಮಾರ್ಚ್ ಮೂರನೇ ವಾರ ಆರಂಭಗೊಂಡ ಕ್ರೈಂ ರಿಪೋರ್ಟರ್, ಸುಮಾರು ಒಂದೂವರೆ ವರ್ಷ ಕಾಲ ಪ್ರಕಟಗೊಂಡು ನಂತರ ಸ್ಥಗಿತಗೊಂಡಿತು.
ಎಂಟು ಪುಟಗಳ, ಟ್ಯಾಬ್ಲಾಯ್ಡ್ ಮಾದರಿಯ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ನಾಲ್ಕು ರೂಪಾಯಿಗಳಾಗಿತ್ತು. ಸಂಪಾದಕರು, ಪ್ರಕಾಶಕರು, ಮಾಲಕರು ಮತ್ತು ಮುದ್ರಕರು ಶ್ರೀರಾಮ ದಿವಾಣರಾಗಿದ್ದರು. ಉಡುಪಿಯ ಕನ್ನರ್ಪಾಡಿಯಿಂದ ಪತ್ರಿಕೆ ಪ್ರಕಾಶನಗೊಳ್ಳುತ್ತಿತ್ತು.
ರಾಜಕೀಯ, ಸಾಮಾಜಿಕ, ಸಾಹಿತ್ಯ, ಅಪರಾಧ ಲೋಕಕ್ಕೆ ಸಂಬಂಧಿಸಿದ ವಿಶೇಷ ವರದಿಗಳು, ತನಿಖಾ ವರದಿಗಳು, ವೈಚಾರಿಕ, ವೈಜ್ಞಾನಿಕ, ಮೌಢ್ಯ ವಿರೋಧಿ ಲೇಖನಗಳು, ಸಂಪಾದಕೀಯ, ವಿವಿಧ ವಿಷಯಗಳ ಕುರಿತು ವಿಶ್ಲೇಷಣೆಗಳು, ವಿಮರ್ಶೆಗಳು ಆದ್ಯತೆಯಲ್ಲಿ ಪ್ರಕಟಗೊಳ್ಳುತ್ತಿದ್ದುವು
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!