ಕನ್ನಡ ನಮ್ಮೆಲ್ಲರ ಮನೆ ಮನೆಯ ಮಾತು

ಕಾಯುತಲಿ ಪ್ರೀತಿಸಿ ಅಪ್ಪೋಣವೆಂದು

ಕಿನ್ನರರಾಗಿ ಬೆಳೆಸೋಣ ಬಂಧುಗಳೆ

ಕೀರ್ತಿಯ ಶಿಖರಕ್ಕೆ ಒಯ್ಯೋಣವೆಂದು

ಕುಜನರನು ದೂರ ತಳ್ಳುತಲಿ ನಡೆಯೋಣ

ಕೂಟದಲಿ ಸಂತಸದಿ ಮೆರೆಯೋಣ ಬನ್ನಿ

ಕೃಪೆಯಿರಲಿ ತಾಯಿ ಭುವನೇಶ್ವರಿಯ ಮಕ್ಕಳೆಂದು

ಕೆಸರನ್ನು ಎರಚದೆ ಸಂಭ್ರಮಿಸೋಣ ಬಾಂಧವರೆ

ಕೇದಗೆಯ ಘಮಲನ್ನು ಹಬ್ಬಿಸುತ ಕನ್ನಡದಲಿ

ಕೈಗೆ ಕೈ ಜೋಡಿಸುತ ಮೆರವಣಿಗೆ ಹೋಗೋಣ

ಕೊಟ್ಟು ತೆಗೆದುಕೊಳ್ಳುವ ಹೃದಯವಂತರಾಗೋಣ

ಕೋವಿದರು ಬದುಕಿ ಬಾಳಿದ ನಾಡಿದು

ಕೌತುಕದ ತಾಣವಿದು ವೀಕ್ಷಿಸುತ ಮೆರೆದಾಡಿ

ಕಂದನಂತೆ ಅಪ್ಪಿ ಮುದ್ದಾಡುವಳು ಕನ್ನಡಮ್ಮ

(ಕ:)ಕಹಳೆಯೂದುತ ನಮಿಸೋಣ ತಾಯ ಪಾದ ಪದ್ಮಗಳಿಗೆ

-ರತ್ನಾ ಕೆ ಭಟ್,ತಲಂಜೇರಿ ಪುತ್ತೂರು