ಆತನ ಕೆಲಸವೇ ಆಯುಧಗಳನ್ನ ಮಾಡೋದು. ತನ್ನ ತಂದೆಯಿಂದ ಬಂದ ವಿದ್ಯೆಯನ್ನ ತಾನು ಮುಂದುವರಿಸಿಕೊಂಡು ಹೋಗಿಬಿಟ್ಟ. ತನ್ನೂರಿಗೆ ಅಂತಲ್ಲ ಸುತ್ತಮುತ್ತ ಎಲ್ಲೇ ಇದ್ದರೂ ಕೂಡ ಇವನ ಬಳಿ ಬಂದು, ಆಯುಧಗಳನ್ನ ಮಾಡಿಸಿಕೊಳ್ಳುತ್ತಾ ಹೋಗ್ತಾ ಇದ್ರು. ಅಷ್ಟು ನಂಬಿಕೆಯ ಅಯುಧ. ಇವನ ಶಸ್ತ್ರ ಹಿಡಿದಾಗ ಎದುರಾಳಿಗೆ ಸೋಲು ಖಂಡಿತ ಘೋಷಣೆಯಾಗಿತ್ತಿತ್ತು. ಎಲ್ಲರೂ ವಿವಿಧ ವಿನ್ಯಾಸದ ಯುದ್ಧ ಸಾಮಾಗ್ರಿಗಳನ್ನು ಅವರವರ ರಾಜ್ಯಕ್ಕೆ ಒಯ್ದುಬಿಟ್ರು. ಯುದ್ಧ ಆರಂಭವಾಯಿತು ಇವನಿಗೆ ಆಯುಧಗಳನ್ನು ಹಿಡಿದುಕೊಂಡು ಇವರದೇ ಊರಿನ ಮಧ್ಯ ಭಾಗದಲ್ಲಿ ಎರಡು ಊರಿನ ಜನ ಹೊಡೆದಾಟಕ್ಕೆ ಇಳಿದುಬಿಟ್ರು ಈತನು ಅಂಗಡಿ ಮುಚ್ಚಿ ಅಂಗಡಿ ಒಳಗೆ ಗಟ್ಟಿಯಾಗಿ ಬಿಟ್ಟ ರಾತ್ರಿ ಮನೆಗೆ ತಲುಪುವಾಗ  ಮನೆ ಮೌನದಿಂದ ತುಂಬಿ ಹೋಗಿತ್ತು. ಅಂಗಳದಲ್ಲಿ ಕತ್ತಿಯ ತುದಿಗೆ ಮೆತ್ತಿಕೊಂಡಿದ್ದ ರಕ್ತ ತನ್ನ ಮನೆಯವರು ಮಸಣ ಸೇರಿರುವ ಕತೆ ಹೇಳಿದ್ದ. ತಾನು  ತಯಾರಿಸಿದ ಕತ್ತಿ ಆತನ ಬದುಕನ್ನ ಪ್ರಪಾತಕ್ಕೆ ತಳ್ಳಿ ಬಿಟ್ಟಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ