ಅಪ್ಪನಿಗೆ ಮಗನ ಮುಖ ನೋಡುವಾಗ ತಿಳಿದುಹೋಗಿತ್ತು, ಮಗ ತನ್ನ ಸಾಧ್ಯತೆಗಳನ್ನು ಮರೆತು ಮೌನವಾಗಿ ಬಿಟ್ಟಿದ್ದಾನೆ ಅನ್ನೋದು. ಅದನ್ನ ಅವನಿಗೆ ಬೈದು ಎಷ್ಟು ಸಲ ಹೇಳಿದರೂ ಆತನ ಅರ್ಥಮಾಡಿಕೊಳ್ಳುವವನಲ್ಲ ಹಾಗಾಗಿ ಅವನಿಗೆ ಅರ್ಥ ಮಾಡಿಸುವುದಕ್ಕೆ ದಾರಿಯನ್ನ ಹುಡುಕ್ತಾ ಇದ್ರು. ಮಗನಿಗೆ ಮನೆಯಲ್ಲಿ ಅಪ್ಪ ಸ್ಪರ್ಧೆಯೊಂದನ್ನು ಆಯೋಜಿಸಿದ್ರು ಈ ಸ್ಪರ್ಧೆಯಲ್ಲಿ ಆತ ಗೆಲುವನ್ನು ಪಡೆದರೆ ಆತನ ಇಷ್ಟದ ಮೊಬೈಲ್ ಕೊಡಿಸುವ ಭರವಸೆಯನ್ನು ನೀಡಿದರು. ಆತ ಒಪ್ಪಿಕೊಂಡ ಮೊಬೈಲ್ ಸಿಗುತ್ತೆ ಅನ್ನುವಾಸೆಯಿಂದ. ಆತನ ಮುಂದೆ ಒಂದಷ್ಟು ಬೀಗಗಳನ್ನು ಇಟ್ಟು ಅದನ್ನ ತೆರೆಯುವುದಕ್ಕೆ ಹೇಳಿದರು ಆತನ ಮುಂದೆ ರಾಶಿಗಟ್ಟಲೆ ಬೀಗದ ಕೀಲಿಗಳು ಇದ್ದವು. ಆತ ಹುಡುಕಲೇ ಬೇಕಿತ್ತು ಯಾವ ಬೀಗಕ್ಕೆ ಯಾವ ಬೀಗದ ಕೀಲಿ ಕೈ ಹಾಕಬೇಕು ಅನ್ನೋದನ್ನು ಸತತವಾಗಿ ಹಲವು ಗಂಟೆಗಳ ಶ್ರಮ ಪಟ್ಟ ನಂತರ ಎಲ್ಲಾ ಬೀಗಗಳು ತೆರೆದುಕೊಂಡವು. ಅಪ್ಪ ಅವನಿಷ್ಟದ ಮೊಬೈಲನ್ನ ಅವನ ಕೈಯಲ್ಲಿಟ್ಟು ವಿಷಯ ತಿಳಿಸಿದರು ನೋಡು ಮಗು ಒಂದೆರಡು ಬೀಗಗಳನ್ನು  ತೆರೆಯಲು ಪ್ರಯತ್ನಿಸಿದಾಗ ಸಾಧ್ಯವಾಗುವುದಿಲ್ಲ ಅಂತಂದುಕೊಂಡು ಸುಮ್ಮನಾಗಿ ಬಿಟ್ಟಿದ್ದರೆ ಇದ್ಯಾವುದೇ ಬೀಗವನ್ನು ತೆರೆಯುವುದಕ್ಕೆ ನಿನ್ನಿಂದ ಆಗುತ್ತಿರಲಿಲ್ಲ. ಪ್ರತಿ ಬೀಗವು ಒಂದು ಬೀಗದ ಕೀಲಿಯನ್ನು ಹೊಂದಿರುತ್ತದೆ. ಬರಿಯ ಬೀಗ ಎಲ್ಲಿಯೂ ತಯಾರಾಗುವುದಿಲ್ಲ. ಹಾಗಾಗಿ ಸಮಸ್ಯೆಗಳೆಲ್ಲದಕ್ಕೂ ಪರಿಹಾರ ಇದ್ದೇ ಇರುತ್ತೆ ಬರಿ ಸಮಸ್ಯೆಗಳು ಹುಟ್ಟಿಕೊಳ್ಳುವುದೇ ಇಲ್ಲ ಹಾಗಾಗಿ ಸಮಸ್ಯೆಯನ್ನು ಯೋಚಿಸುವುದರ ಬದಲು ಪರಿಹಾರವನ್ನು ಯೋಚಿಸು. ಒಳಿತು ಆಗ್ತದೆ, ಮಗನಿಗೆ ವಿಷಯ ಸುಲಭವಾಗಿ ಅರ್ಥವಾಗಿ ತಲೆಯೊಳಗೆ ಗಟ್ಟಿಯಾಗಿ ಕುಳಿತುಕೊಂಡು ಬಿಟ್ಟಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ