ಸಮಯ ಪಾಲಿಸುತ್ತಿಲ್ಲ, ಹೇಳಿದ ಸಮಯಕ್ಕೆ ಸರಿಯಾಗಿ ಬರೋದಕ್ಕೆ ಆಗೋದಿಲ್ಲ ,ಹೇಳಿದ್ದನ್ನ ಸಮಯಕ್ಕೆ ಸರಿಯಾಗಿ ಮುಗಿಸುವುದಕ್ಕೆ ಆಗುವುದಿಲ್ಲ, ಅಚ್ಚು ಕಟ್ಟುತನ ಕಾಣುತ್ತಿಲ್ಲ, ಜವಾಬ್ದಾರಿಯನ್ನ ನಿಭಾಯಿಸುವುದಕ್ಕೆ ಸಾಧ್ಯವಿಲ್ಲವೆಂದ ಮೇಲೆ ಹೆಗಲ ಮೇಲೆ ಹೊತ್ತುಕೊಳ್ಳುವುದೇನಕೆ? ಒಂದು ಸಲ ಕೊಟ್ಟ ಮಾತನ್ನ ಪಾಲಿಸುವುದಿಲ್ಲವಾದರೆ ಮಾತು ಕೊಡುವುದನ್ನು  ಮರೆತುಬಿಡಬೇಕು. ಸಾಧಿಸಿ ತೋರಿಸಬೇಕು. ಇಷ್ಟೆಲ್ಲ ತಪ್ಪುಗಳನ್ನು ಹೊತ್ತುಕೊಂಡಿರುವ ನೀವೆಲ್ಲ ಹೇಗೆ ಜೀವನದಲ್ಲಿ ಉದ್ದಾರವಾಗುತ್ತೀರಿ, ಹೇಗೆ ಸಾಧನೆ ಮಾಡುತ್ತೀರಿ? ನೀವು ನನ್ನ ಬಗ್ಗೆ ಕೇಳ್ತಾ ಇದ್ದೀರಾ, ಹೌದು ನಾನು ಸಮಯವನ್ನು ಕೆಲವೊಂದು ಸಲ ತಪ್ಪಿಸುತ್ತೇನೆ ಕಾರಣ ಹಲವು ಇದೆ. ಕೆಲಸಗಳು ಹೆಚ್ಚಾದಾಗ ಕೆಲವೊಂದರ ಕಡೆಗೆ ಗಮನ ಕೊಡುವುದಕ್ಕೆ ಆಗುವುದಿಲ್ಲ, ಪ್ರತಿದಿನ ಬೆಳಗ್ಗೆ ಬೇಗ ಏಳಬೇಕು ಅಂದುಕೊಂಡಿರುತ್ತೇನೆ ಆದರೆ ಕೆಲಸ ಹೆಚ್ಚಾದ ಕಾರಣ ದೇಹಕ್ಕೆ ಸುಸ್ತಿರುತ್ತದೆ. ನೀವು ಮತ್ತೆ ನನ್ನನ್ನ ಪ್ರಶ್ನೆ ಮಾಡುವ ಹಾಗಿಲ್ಲ ನಾನು ನಿಮ್ಮ ತಪ್ಪುಗಳನ್ನು ಹೇಳಬಹುದು ನೀವು ಯಾವ ದಾರಿಯಲ್ಲಿ ಸಾಗಬೇಕು ಅನ್ನೋದನ್ನ ತಿಳಿಸಬಹುದು ಅದು ನನ್ನ ಜವಾಬ್ದಾರಿ .ಆದರೆ ನೀವು ನನಗೆ ದಾರಿ ತೋರಿಸು ಬೇಕಿಲ್ಲ ನನ್ನ ಜವಾಬ್ದಾರಿಯನ್ನು ತಿಳಿಸುವ ಹಾಗೂ ಇಲ್ಲ ಅರ್ಥವಾಯಿತು ತಾನೆ ? ಹೀಗೆ ಪ್ರತಿದಿನ ದ್ವಂದದಲ್ಲೇ ಬದುಕುತ್ತಿರುವ ರಾಜೇಶನಿಗೆ ಆತನನ್ನ ಸರಿದಾರಿಗೆ ತರುವವರು ಇನ್ನೆಂದು ಸಿಗುವವರೋ? ಮನೆಯಲ್ಲಿ ತಂದೆ ತಾಯಿ, ಚಿಂತಾಕ್ರಾಂತರಾಗಿದ್ದಾರೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ