ಆತನಿಗೆ ಬೇಸರವಿದೆ. ಆದರೆ ಅದನ್ನ ಎಲ್ಲೂ ಹೇಳಿಕೊಳ್ಳುವ ಹಾಗಿಲ್ಲ. ಕಾರಣವಿಷ್ಟೇ ರಾತ್ರಿ ಹಗಲು ಶ್ರಮಪಟ್ಟು ಪೋಲಿಸ್ ಕೆಲಸವನ್ನು ಪಡೆದಿದ್ದಾನೆ. ಇತ್ತಿಚಿಗೆ ಊರಿನಲ್ಲಿ ಕಳ್ಳತನದ ತೊಂದರೆ ಹೆಚ್ಚಾಗುತ್ತಾ ಹೋಯಿತು. ರಾತ್ರಿ ಹಗಲು ಪೊಲೀಸ್ ಇಲಾಖೆ ನಿದ್ದೆ ಬಿಟ್ಟು ಕಳ್ಳತನ ಮಾಡುತ್ತಿದ್ದವರನ್ನು ಹಿಡಿದು ಜೈಲಿನೊಳಕ್ಕೆ ತಳ್ಳಿ ಬಿಟ್ಟರು. ಹಾಗೆ ಜೈಲಿನೊಳಕಿದ್ದವರು ಕೆಲವು ಸಮಯಗಳ ನಂತರ ಜಾಮೀನು ಪಡೆದು ಹೊರಗಡೆ ರಾಜಾರೋಷವಾಗಿ ತಿರುಗಾಡ್ತಾ ಮತ್ತೊಂದು ಅಪರಾಧದಲ್ಲಿ ಬಂದಿಯಾದರು ಮತ್ತೆ ಜಾಮೀನಿನಿಂದ ಹೊರಗೆ, ಹೀಗೆ ಈ ಚಕ್ರ ಮುಂದುವರೆದು ಮುಂದುವರೆದು ಇಪ್ಪತ್ತಕ್ಕೂ ಹೆಚ್ಚು ಕೇಸ್ ದಾಖಲಾದರೂ ಕೂಡ ಯಾವುದೇ ರೀತಿಯ ಶಿಕ್ಷೆ ಅವರಿಗಾಗ್ತಾ ಇಲ್ಲ. ಹಾಗಾಗಿ ಅವನಿಗೆ ಅನ್ನಿಸಿರೋದು, ಜೈಲಿನೊಳಗೆ ಹೋಗಿರುವವನು ಮತ್ತೆ ಹೊರಗೆ ಬಂದಾಗ ಬದಲಾವಣೆ ಆಗಿರಬೇಕು ಇಲ್ಲವಾದರೆ ಆತನನ್ನ ಮನೆಯೊಳಕ್ಕೆ ಇಟ್ಟಿರಬಹುದಲ್ಲ ಆ ಪ್ರಶ್ನೆ ಹಾಗೆ ಇದೆ ಉತ್ತರಕ್ಕಾಗಿ ಹುಡುಕುತ್ತಿದ್ದಾನೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!