ನಾನು ಅಕ್ವೇರಿಯಂ ಒಂದನ್ನು ಮನೆಗೆ ತಂದಿಟ್ಟಿದ್ದೇನೆ. ಅದು ತುಂಬಾ ಸುಂದರವಾಗಿದೆ ದೊಡ್ಡದಾಗಿದೆ ಗಾಳಿ ಬೆಳಕು ಎಲ್ಲವೂ ಯಥೇಚ್ಛವಾಗಿ ಸಿಕ್ತಾ ಇದೆ, ಅದಲ್ಲದೆ ಅದು ಚಿನ್ನದ ಅಕ್ವೇರಿಯಂ. ಆದರೂ ಯಾಕೆ ಅದರೊಳಗೆ ಮೀನಿಗೆ ಬದುಕೋಕೆ ಸಾಧ್ಯವಾಗ್ತಾ ಇಲ್ಲ. ಅದು ಚಿನ್ನದ ಅಕ್ವೇರಿಯಂ ಆದ ಕಾರಣ ಅದರೊಳಗೆ ನೀರು ತುಂಬಿಸುವ ಅವಶ್ಯಕತೆ ಏನಿದೆ. ಮಾಮೂಲಿ ಅಕ್ವೇರಿಯಂ ಅಲ್ಲವಲ್ಲ ಮೀನಿಗೆ ಮತ್ತೆ ಮತ್ತೆ ಹೇಳಿದ್ದೇನೆ ಅದು ಚಿನ್ನದ ಅಕ್ವೇರಿಯಂ ಅದರೊಳಗೆ ಬದುಕು ಅಂತ, ಮೀನು ನನ್ನ ಮಾತನ್ನು ಕೇಳುತ್ತಿಲ್ಲ ಒದ್ದಾಡಿ ಒದ್ದಾಡಿ ಸಾಯುತ್ತಿದೆ. ನಿಮ್ಮೊಂದಿಗೆ ಯಾವುದಾದರೂ ಮೀನಿದ್ದರೆ ಹೇಳಿ ಚಿನ್ನದ ಅಕ್ವೇರಿಯಂ ಒಳಗಡೆ ಬದುಕಲು ಆಸೆ ಬರುವ ಮೀನಿದ್ದರೆ ನಾನು ಅಕ್ವೇರಿಯಂ ಒಳಗಡೆ ಅದನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಯಾರಿಂದಲೂ ಉತ್ತರ‌ ದೊರಕದ ಗೋಪಾಲ ಇನ್ನೂ ಕಾಯುತ್ತಿದ್ದಾನೆ. ಆತನಿಗೆ ಅರ್ಥವಾಗಿಲ್ಲ ಬದುಕಿಗೆ ಅವಶ್ಯಕತೆ ಇರುವುದರ ಜೊತೆ ಬದುಕಬೇಕು. ಆಡಂಬರದ ಜೊತೆಯಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ