ಆ ಮನೆಗೆ ತುಂಬಾ ನೋವಾಗ್ತಾ ಇದೆ. ಆ ಮನೆ ಇರುವ ಜಾಗದಲ್ಲಿ ನಾಲ್ಕು ಗೋಡೆಗಳ ಮೇಲೆ ಹಂಚು ಹೊತ್ತಿರುವ ಪುಟ್ಟದಾದ ಗೂಡಿತ್ತು. ಆ ಗೂಡಿನೊಳಗಡೆ ಪುಟ್ಟ ಸಂಸಾರ ನೆಮ್ಮದಿಯಿಂದ ಬದುಕ್ತಾ ಇತ್ತು. ಮನೆಯವರು ಶಿಕ್ಷಣ ಓದುವಿಕೆ ಎಲ್ಲವೂ ಉತ್ತಮವಾಗಿ ದೊಡ್ಡ ಉದ್ಯೋಗವು ಸಿಕ್ಕಿತು. ಆ ಉದ್ಯೋಗವನ್ನು ಪಡೆದು ದೊಡ್ಡ ದೊಡ್ಡ ಊರುಗಳಲ್ಲಿ ಬದುಕು ಕಟ್ಟಿಕೊಂಡರು. ಪುಟ್ಟ ಗುಡಿಸಲನ್ನು ದೊಡ್ಡ ಮನೆಯಾಗಿ ಕಟ್ಟುವ ಜವಾಬ್ದಾರಿಯನ್ನು ವಹಿಸಿಕೊಂಡರು. ಮನೆ ನಿರ್ಮಾಣ ಆಯ್ತು ಮನೆಗೂ ತುಂಬ ಸಂಭ್ರಮ ಇಷ್ಟು ದಿನದವರೆಗೆ ಪುಟ್ಟ ಗೂಡಾಗಿದ್ದೆ, ಇನ್ನು ಮುಂದೆ ಅದ್ಭುತವಾಗಿ ಮೇಲೆದ್ದು ನಿಲ್ಲಲಿಕ್ಕಿದೆ ಹಲವಾರು ಕೋಣೆಗಳು, ಮನೆಯ ಮುಂದೆ ಉದ್ಯಾನವನ ಚಿತ್ತಾರದ ಬಣ್ಣ ಮನೆಗೂ ತನ್ನ ನೆಲೆ ಒಂದು ಗಟ್ಟಿಗೊಳ್ಳುತ್ತದೆ ಎನ್ನುವ ಸಂತಸ ಮನೆಯೇನೋ ನಿರ್ಮಾಣವಾಯಿತು ಆದರೆ ಮನೆ ಮಕ್ಕಳು ಊರು ಬಿಟ್ಟು ಈಗ ಮನೆ ಒಂಟಿಯಾಗಿ ನಿಂತುಬಿಟ್ಟಿದೆ .ಆಗಾಗ ಹಬ್ಬಕ್ಕೂ ಸಂಭ್ರಮಕ್ಕೂ ವರ್ಷಕ್ಕೊ ಒಂದೆರಡು ಬಾರಿ ಬಂದು ಮನೆಯೊಳಗೆ ಓಡಾಡಿ ಮತ್ತೆ ಮಾಯವಾಗುವವರು ಇನ್ನೊಂದು ಸಂಭ್ರಮದವರೆಗೆ ಮನೆ ಕಾಯಲೇ ಬೇಕು ಹಾಗಾಗಿ ಮನೆ ಸಂಭ್ರಮದಲ್ಲಿ ಇಲ್ಲ. ನನಗೆ ನಿಮ್ಮ ಸ್ಪರ್ಶ ಬೇಕು ಮಾತು ಬೇಕು ಎಲ್ಲವನ್ನು ಕಾಯುತ್ತಿದೆ ಮನೆ.  ಮನೆಯೊಳಗೆ ಮನವಿಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ