ಯಾರದೋ ಕರೆ ಬಂತೆಂದು ಬೈಕ್ ಅನ್ನು ಸೈಡಿಗೆ ನಿಲ್ಲಿಸಿ ಕರೆಯಲ್ಲಿ ಮಾತನಾಡುತ್ತಿದ್ದೆ. ಆಗ ನನ್ನ ಮುಂದೆ ಇಬ್ಬರ ವಾದ ಮುಂದುವರೆದಿತ್ತು,
"ನಮ್ಮಲ್ಲಿ ಜನ ಕಳೆದು ಹೋಗ್ತಾರೆ, ಒಳ್ಳೆಯದೋ ಕೆಟ್ಟದ್ದೋ ಸರಿಯೋ ತಪ್ಪೋ ಗೊತ್ತಿಲ್ಲ, ಆಗಾಗ ಕಣ್ಣಿಗೆ ಕಂಡವರು ಕೆಲವರು ಕಳೆದು ಹೋಗ್ತಾರೆ, ಅವರನ್ನು ಹುಡುಕುವುದೇ ಕಷ್ಟ"
"ಇಲ್ಲ ನನ್ನ ಪ್ರಕಾರ ಜನ ಕಳೆದುಹೋಗುವುದಿಲ್ಲ, ಜನ ಬದಲಾಗುವುದು ಮಾತ್ರ. ವಸ್ತುಗಳು ಕಳೆದು ಹೋಗಬಹುದು ಆದರೆ ಮನುಷ್ಯ ಕಳೆದುಹೋಗುವುದಕ್ಕೆ ಸಾಧ್ಯವಿಲ್ಲ. ಬದಲಾಗಬಹುದು. ನಿನ್ನ ಜೊತೆಗೆ ಮಾತನಾಡುತ್ತಿದ್ದ ರೀತಿ ಬದಲಾಗಬಹುದು, ಆತನಿಗೆ ನೀನು ಬೇರೆಯವನಾಗಿ ಅರ್ಥವಾಗಿರಬಹುದು, ನಿನ್ನ ಜೊತೆ ಮಾತನಾಡುವುದು ವ್ಯರ್ಥ ಎನ್ನಿಸಬಹುದು ಹೀಗೆ ಕಾರಣಗಳು ಹಲವು ಮನುಷ್ಯರು ಕಾಣೆಯಾಗುವುದಲ್ಲ, ಬದಲಾಗುವುದು ಅಷ್ಟೇ. ನೀನು ಅದನ್ನು ಕಾಣೆಯಾಗುವುದು ಅಂದುಕೊಂಡಿದ್ದೀಯಾ" .
ನನಗೆ ಇಬ್ಬರ ವಾದವನ್ನು ಕೇಳಿ ಯಾವುದರ ಕಡೆಗೆ ವಾಲಬೇಕು ಅಂತ ಗೊತ್ತಾಗಲಿಲ್ಲ. ಇಬ್ಬರ ವಾದ ಚೆನ್ನಾಗಿತ್ತು ಹಾಗಾಗಿ ಸಿಕ್ಕಿದ್ದನ್ನು ಹಾಗೆಯೇ ನಿಮ್ಮ ಮುಂದೆ ಇಟ್ಟಿದ್ದೇನೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!