ಕಾರಣವಿದ್ದರೇನೆ
ನೋವು, ನೋವಿದ್ದರೇನೆ
ಬದುಕುವ ಛಲವು
ಬಾಳ್ವೆಯು ಸುಗಮವು !
*
ವಿಮರ್ಶೆಯಲಿ
ಕವಿ ಬೆಳಗಬೇಕು
ಬಾಡ ಬಾರದು !
*
ಭಟ್ಟಂಗಿಗಳ
ಬರಹಗಳ ನಡುವೆ
ನಾವಿರುವೆವು !
*
ಬರೆದುದೆಲ್ಲವು
ಸಾಹಿತ್ಯವಲ್ಲ, ಸತ್ಯ
ಕಲಿಯಬೇಕು !
*
ಕೃತಿ ಚೌರ್ಯದ
ಕರಾಮತ್ತಿನ ನಡೆ
ಪ್ರಶಸ್ತಿ ಕಡೆ !
*
ಅವ ಇವ
ಪಲಾಯನ ವಾದಿ
ನಾನು ಮಾತ್ರ
ಸುಪರ್
ವೇದಿ
ಎನ್ನುವವರು
ನನ್ನ
ಲೆಕ್ಕದಲ್ಲಿ
ಪಲಾಯನ
ವ್ಯಾಧಿಗಳು !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!