ಅವರು ಆ ಊರಿನಲ್ಲಿ ಮತ್ತೆ ಮತ್ತೆ ಘೋಷಣೆಗಳನ್ನು ಹೇಳ್ತಾ ಇದ್ರು. ಎಚ್ಚರಿಕೆಯನ್ನು ನೀಡ್ತಾ ಇದ್ರು. ಎಲ್ಲರೂ ಕೂಡ ಈಜುವುದಕ್ಕೆ ಕಲಿಯಿರಿ, ಬೆಂಕಿ ಬಂದಾಗ ಅದರಿಂದ ತಪ್ಪಿಸಿಕೊಳ್ಳುವುದನ್ನ ಕಲಿಯಿರಿ. ಬದುಕಿಗೆ ಹೊಸ ದಾರಿ ಹೊಸ ಅವಕಾಶಗಳ ಬಗ್ಗೆ ತಿಳಿದುಕೊಳ್ಳಿ ಹೀಗೆ ಆದರೆ ಬದುಕು ಕಷ್ಟವಾಗುತ್ತದೆ ಅಂತ ಆದರೆ ಅಲ್ಲಿದ್ದವರು ಯಾರು ಅವರ ಮಾತನ್ನು ಕೇಳುವುದಕ್ಕೆ ತಯಾರಿರಲಿಲ್ಲ. ಬಂದಾಗ ನೋಡಿಕೊಳ್ಳುವ ನಾವು ಕಲಿತೇವೆ ಸಮಯ ಇದೆ ವರ್ಷಗಳೇ ಉರುಳುತ್ತಾ ಹೋದರೂ ಆತ ಹೇಳುವುದನ್ನ ನಿಲ್ಲಿಸಲೇ ಇಲ್ಲ. ಸತತವಾಗಿ ಜನರ ತಲೆಯೊಳಗೆ ಇಳಿಯುವ ಪ್ರಯತ್ನವನ್ನು ಮಾಡ್ತಾ ಇದ್ರು. ಕೆಲವರು ಕಲಿತರು ಕೆಲವರು ಮರೆತರು. ಊರಿನಿಂದ ಸ್ವಲ್ಪ ದೂರದಲ್ಲಿದ್ದ ಅಣೆಕಟ್ಟು ತುಂಡಾಗಿ ಊರು ಮುಳುಗೋದಕ್ಕೆ ಆರಂಭವಾಯಿತು. ಅರ್ಧ ಊರು ಮುಳುಗಡೆಯಾಗಿ ಹಲವು ಜನ ಪ್ರಾಣ ಕಳೆದುಕೊಂಡರು. ಯಾವುದೋ ಕಾರಣಕ್ಕೆ ಸಣ್ಣ ಬೆಂಕಿ ಊರ ಸುಡುವುದ್ದಕ್ಕೆ ಶುರು ಮಾಡಿತು. ಅಲ್ಲೂ ಕೂಡ ತಪ್ಪಿಸಿಕೊಳ್ಳಕ್ಕಾಗದೆ ಹಲವರು ಪ್ರಾಣ ಬಿಟ್ರು. ಕೆಲಸ ಕಳೆದುಕೊಂಡವರು ಹೊಸ ಕೆಲಸದ ಅರಿವಿಲ್ಲದೆ ಹಸಿವಿನಿಂದ ನರಳುವುದಕ್ಕೆ ಆರಂಭವಾದರೂ. ಈಗ ಎಲ್ಲರೂ ಬದುಕುವ ಹೊಸ ದಾರಿಗಾಗಿ ತಿಳಿಸಿ ಕೊಡುವಂತೆ ಅಜ್ಜನನ್ನ ಹುಡುಕ್ತಾ ಇದ್ರು, ಅಜ್ಜ ಯಾವಾಗಲೂ ಊರು ಬಿಟ್ಟಿದ್ದ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!