ಅಮ್ಮನ ಕನಸನ್ನ ನನಸು ಮಾಡಬೇಕು ಹಾಗಾಗಿ ನನ್ನ ಉಳಿತಾಯದ ಹಣ, ಒಂದಷ್ಟು ಸಾಲ, ಅಮ್ಮನ ಚಿನ್ನ ಎಲ್ಲವನ್ನು ಸೇರಿಸಿ ಮನೆ. ಕಟ್ಟಿದ ಮನೆಯನ್ನ ನೋಡಿ ಆತನಿಗೆ ಮದುವೆ ಆಗಬೇಕಿತ್ತು. ದೇವರ ದಯೆಯಿಂದ ಅದು ಅದ್ಭುತವಾಗಿ ನಡೆಯಿತು. ಮನೆಗೆ "ಮಗನಿಗೆ ಅಮ್ಮ ನೀಡಿದ ನೆರಳು" ಹೆಸರನ್ನ ದಾಖಲಿಸಿದ ಊರಿನಲ್ಲಿ ಎಲ್ಲರ ಬಾಯಲ್ಲಿ ಆತನ ಗುಣಗಾನ ಮುಂದುವರೆದಿತ್ತು. ಕಾಲ ಹಾಗೆ ನಿಲ್ಲೋದಿಲ್ಲ ನೋಡಿ ಆ ಕಡೆಗೆ ಸಮಾಜದಲ್ಲಿ ಅತ್ಯುತ್ತಮ ಪ್ರಶಸ್ತಿ ಬಂದಾಗ ದೊಡ್ಡದಾದ ಪೋಟೋವನ್ನ ವೃದ್ಧಾಶ್ರಮದಲ್ಲಿ ಕುಳಿತು ದಿನಪತ್ರಿಕೆಯಲ್ಲಿ ಓದುತ್ತಿದ್ದರು ಅಮ್ಮ. ತನ್ನ ಮಗನಿಗೆ ಮನೆಯೊಂದನ್ನ ಕಟ್ಟಿ ನೆರಳು ಕೊಟ್ವವಳಿಗೆ, ಮಗ ನಾಲ್ಕು ಗೋಡೆಗಳನ್ನು ನಡುವೆ ಅನಾಥಾಲಯದ ಮಧ್ಯದಲ್ಲಿ ತಾನೂ ಜೊತೆಗೆ ನೆರಳಾಗಿ ನಿಲ್ಲದೆ ದೂರ ಸರಿಸಿದ್ದ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ