ಆ ಮರವನ್ನು ಬೇರು ಸಮೇತ ಕಿತ್ತು ಹಾಕುವುದಕ್ಕೆ ರಾಜೇಶ ಕಾಯುತ್ತಿದ್ದಾನೆ. ಆತನಿಗೆ ಆ ಮರದ ಅವಶ್ಯಕತೆ ಇಲ್ಲ ಅದನ್ನ ನಾಶ ಮಾಡಿಬಿಡಬೇಕು, ಅದರಿಂದ ಆತನ ಮನೆಗೆ ಒಳಿತಾಗುತ್ತದೆ ಅನ್ನೋದು ಅವನ ನಂಬಿಕೆ. ಆ ಮರವನ್ನ ಕೀಳುವುದಕ್ಕೆ ಅಂತಲೇ ದಿನವನ್ನ ಮುಂದೂಡಿ ವರ್ಷಗಳೇ ದಾಟಿಬಿಟ್ಟಿದೆ. ಈಗ ಆ ಮರವನ್ನು ಕೀಳುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗ್ತಾಯಿಲ್ಲ. ಬೇರು ತುಂಬಾ ಆಳಕ್ಕೆ ಇಳಿದುಕೊಂಡುಬಿಟ್ಟಿದೆ. ನೆಲವನ್ನು ತುಂಬಾ ಗಟ್ಟಿಯಾಗಿ ಹಿಡಿದುಕೊಂಡಿದೆ. ಈಗ ಬೇರು ಸಮೇತ ಕಿತ್ತರೂ ಅದರ ಕುರುಹುಗಳು ಅಲ್ಲೇ ಉಳಿದುಬಿಡುತ್ತವೆ. ಈಗ ಮತ್ತೆ ಚಿಂತೆ ಹೆಚ್ಚಾಗಿದೆ. ಈ ಕೆಲಸವನ್ನು ಮೊದಲೇ ಮಾಡಿಬಿಡಬೇಕಿತ್ತು. ಅದನ್ನು ಪಕ್ಕದಲ್ಲಿ ಕುಳಿತ ಮಗನಿಗೆ ಮತ್ತೆ ಮತ್ತೆ ಹೇಳಿದ ಯಾವುದನ್ನಾದರೂ ಬೇರು ಸಮೇತ ಕಿತ್ತು ಹಾಕುವುದಿದ್ದರೆ ಆರಂಭದಲ್ಲಿ ಮಾಡಿಬಿಡು ಮತ್ತೆ ಎಷ್ಟೇ ಪ್ರಯತ್ನ ಪಟ್ರು ಅದು ಸಾಧ್ಯವಾಗುವುದಿಲ್ಲ ಅಂತ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!