ಇವತ್ತು ರಮೇಶನ ಮನೆಗೆ ಪೊಲೀಸರು ಬಂದಿದ್ದರು. ಕಾರಣವಿಷ್ಟೇ ಆತ ವರ್ಷಂಪ್ರತಿ ಕಟ್ಟಬೇಕಾಗಿದ್ದ ತೆರಿಗೆಯನ್ನು ಸರಿಯಾಗಿ ಕಟ್ಟಿರಲಿಲ್ಲ. ಎಷ್ಟು ಸಲ ಹೇಳಿದರೂ ಆ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅದಕ್ಕಾಗಿ ಅದರ ಬಗ್ಗೆ ವಿಚಾರಣೆಗೆ ಪೋಲಿಸರು ಬಂದಿದ್ದರು. ಅದಲ್ಲದೆ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಒಂದಿಷ್ಟು ತೊಂದರೆ ಕೂಡ ಮಾಡಿದ್ದ ಆ ಕಾರಣಕ್ಕು ಪೊಲೀಸರು ಅವನ ಮನೆಗೆ ಬಂದಿದ್ದರು. ಆತ ಅದಕ್ಕೆ ತಗಲುವ ಎಲ್ಲಾ ದಂಡದ ಮೊತ್ತವನ್ನು ಪಾವತಿಸುತ್ತೇನೆ ಆದರೆ ನನ್ನೊಂದಿಷ್ಟು ಪ್ರಶ್ನೆಗಳಿಗೆ ಉತ್ತರ ಕೊಡಿ. ನಾವು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹೇಗೆ ತೊಂದರೆ ಉಂಟು ಮಾಡಿದ್ರೆ ದಂಡ ವಿಧಿಸ್ತಿರೋ ಹಾಗೆ ಸರಕಾರ ನಿಭಾಯಿಸಬೇಕಾದ ಸರಕಾರಿ ಆಸ್ತಿಪಾಸ್ತಿಗಳು ಹಾಳಾದರೆ ಅದಕ್ಕೂ ಸರಕಾರಕ್ಕೆ ದಂಡ ವಿಧಿಸಬೇಕಲ್ವಾ? ನಮಗೆ ತೆರಿಗೆ ಕಟ್ಟುವುದಕ್ಕೆ ನಿರ್ದಿಷ್ಟ ದಿನಾಂಕವನ್ನು ಗೊತ್ತು ಮಾಡುತ್ತೀರಿ ಕಟ್ಟದೇ ಹೋದ್ರೆ ನಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೀರಿ, ಅದೇ ರೀತಿ ಸರಕಾರವು ಕೂಡ ಕೆಲವೊಂದಷ್ಟು ಕೆಲಸಗಳನ್ನು ಈ ದಿನಾಂಕದೊಳಗೆ ಮುಗಿಸಿಕೊಡುತ್ತೇವೆ ಇದನ್ನ ಈ ದಿನದಲ್ಲಿ ಮಾಡಿಕೊಡುತ್ತೇವೆ ಏನೇನೋ ಆಶ್ವಾಸನೆಗಳನ್ನು ಕೊಡುತ್ತಾರೆ ಅವರು ದಿನಾಂಕ ತಪ್ಪಿದಾಗ ಅವರಿಗೂ ಕೂಡ ನೀವು ಯಾವ ರೀತಿಯ ಕ್ರಮ ಕೈಗೊಳ್ಳುತ್ತೀರೋ ಅದೇ ರೀತಿಯ ಕ್ರಮವನ್ನು ನೀವು ನನಗೂ ಕೈಗೊಳ್ಳಿ. ಅಂತಂದು ಬಿಟ್ಟ. ಪೋಲೀಸರ ಬಳಿ ಉತ್ತರವಿರಲಿಲ್ಲ ಸುಮ್ಮನೆ ವಾಪಸು ಹೊರಟು ಹೋದರು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ