ಹಿಂದೆ ಈ ಹಾಡಿನ ಅನುವಾದವನ್ನು  ಅರ್ಧವೇ  ಮಾಡಿ ಸಂಪದದಲ್ಲಿ ಹಂಚಿಕೊಂಡಿದ್ದೆ - ಸಂಖ್ಯೆ 385. ಈಗ ಈ ಹಾಡನ್ನು ಪೂರ್ತಿ ಅನುವಾದ ಮಾಡಿದ್ದೇನೆ . ಮೂಲದ ಧಾಟಿಯಲ್ಲಿಯೇ ನೀವು ಹಾಡಿಕೊಳ್ಳಬಹುದು.

ನಾವಿಬ್ರೂ ಪ್ರೇಮಿಗಳು

ಹೊರಟೆವು ಬಿಟ್ಟೀ ಲೋಕ

ಇಲ್ಲಿನ ನಿಯಮಾನೇ

ನಮಗೇ ಬೇಕಿಲ್ಲ


ಓ ತವರಿನ ನೆನಪು ನಂಗೆ ಬಂದಿತು

ಮುಂದೇನು ಗತಿಯೋ ನನ್ನದು

     ನಾವಿಬ್ರೂ ಪ್ರೇಮಿಗಳು...ನಮಗೇ ಬೇಕಿಲ್ಲ


ಗಾಡಿಗೆ ಹೇಳು ಬೇಗ ಹೋಗಲು

ಪ್ರವಾಸದ ಮಜ ಕೊಂಚ ತೆಗೆದುಕೋ

ನನ್ನನ್ನು ಹೀಗೆ ಛೇಡಿಸದೆ ಇರು

ಹೊತ್ತು ನಮಗೆ ಹೋಗಬೇಕಲ್ಲ.

     ನಾವಿಬ್ರೂ ಪ್ರೇಮಿಗಳು....ನಮಗೇ ಬೇಕಿಲ್ಲ


ಹೋಗೋದು ಎಲ್ಲಿಗೆ

ಹೇಳಮ್ಮ ಆ ಊರ ಹೆಸರ

ಎಲ್ಲಿಗೆ ತಗೊಂಡು

ಹೋಗ್ತೀಯ ನೀ ಅಲ್ಲಿಗೆ

ನನ್ನಲ್ಲಿ ಇದೆಯೆ ಅಷ್ಟು ನಂಬಿಕೇ

ನಿನ್ನನ್ನು ಪ್ರೀತಿ ನಾ ಮಾಡಿಲ್ಲವೇ?

     ನಾವಿಬ್ರೂ ಪ್ರೇಮಿಗಳು....ನಮಗೇ ಬೇಕಿಲ್ಲ


ನನ್ನ ಜತೆಯನ್ನು

ನೀನು ಬಿಡದಿರು ಎಂದಿಗೂ

ಹೇಳಬೇಡ ನೀನು

ಇಂಥ  ಮಾತನ್ನು ಎಂದಿಗೂ

ಮಾಡಿದೆನು ತಮಾಷೆ ಸುಮ್ಮನೆ

ನಾನೂನು ತಮಾಷೆ ಮಾಡಿದೆ

        ನಾವಿಬ್ರೂ ಪ್ರೇಮಿಗಳು....ನಮಗೇ ಬೇಕಿಲ್ಲ