ನಿನ್ನ ಗೊಲ್ಗುಂಭಾಝ್ ಗೋಡೆಗಳ ಪಿಸುಮಾತುಗಳಿಗೆ ಸ್ವರವಾದೆ ನಲ್ಲೆ
ನಿನ್ನಯ ಹೃದಯದೊಳಗಿನ ಬಡಿತಗಳ ಏರಿಳಿತಗಳಿಗೆ ಒಲವಾದೆ ನಲ್ಲೆ
ಬೆಟ್ಟಗುಡ್ಡಗಳ ನಡುವೆಯೆ ನದಿಹುಟ್ಟುವ ಕಾರಣ ನಿನಗೆ ತಿಳಿದಿಲ್ಲವೇನು
ಬಂಜರು ನೆಲದೊಳಗೆ ವಾಸಿಸುವ ಜನರ ಪಾಲಿಗಿಂದು ವರವಾದೆ ನಲ್ಲೆ
ಸೂರ್ಯ ಸುಡುವಾಗ್ನಿ ಆದರೂ ಯೌವನಕ್ಕು ಅದಕ್ಕು ನಂಟಿದೆಯಲ್ಲವೆ
ಸಪ್ನಗಳ ಮಂದಿರವನು ದಾಟಿದರೂ ಗುಲಾಬಿಯೊಳು ಚೆಲುವಾದೆ ನಲ್ಲೆ
ಕಡಲ ಅಲೆಗಳ ಹೊಡೆತಗಳಿಗಿಂದು ಸಿಲುಕಿದಾ ದೋಣಿಯಂತಾದೆ ಏಕೆ
ಲಂಗರು ಹಾಕಿದ ಹಡಗಿನ ಒಡಲಿನ ಸೌಂದರ್ಯಕ್ಕೇ ಗುರುವಾದೆ ನಲ್ಲೆ
ಸಾಧನೆಯೇ ನನ್ನಯ ಗುರಿಯೆಂದು ಸಾಗಿದವನು ನೀನಲ್ಲವೇನು ಈಶ
ಬದುಕಿನಾಳದ ಬಾಳಿನಲ್ಲಿರುವ ಪ್ರತಿಮೆಗಳ ಕೈಹಿಡಿಯುತ ಬಲವಾದೆ ನಲ್ಲೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!