ಹಾಡು ಹಕ್ಕಿಯೆ ನೀ ಹಾಡು

ಎನ್ನ ಒಲವಿನ ನೀ ಹಾಡು

ಹಾಡುತಲೆ ನೀ ಸಾಗುತಲೆ

ಎನ್ನ ಪ್ರೇಯಸಿಗೆ ನೀ ಹಾಡು

 

ಮನೆಯ ಹಿಂದಿನ ಒಂಟಿ ಕಲ್ಲಲಿ

ಕುಳಿತು ನನ್ನನೆ ನೋಡುತಿದ್ದೆ

ಕಣ್ಣ ಸನ್ನೆಲಿ  ಕರೆದು ನನ್ನನು

ಹತ್ತಿರಕ್ಕೆ ಸೆಳೆದೆಯೇಕೆ ?

ಹೇಳೆ ನನ್ನ ಕೋಮಲೆ ?

 

ರಾತ್ರಿ ಚೆಲ್ಲಿದ ಚಂದ್ರ ಬೆಳಕಲಿ

ಮನೆಯ ಮುಂದಿನ ಜಾಲಲಿದ್ದೆ

ಹಾಲ ಬಣ್ಣದಿ ಹೊಳೆಯುತಿದ್ದೆ

ನಿನ್ನ ಚೆಲುವಿಗೆ ಮರುಳನಾಗಿ

ಬಂದು ನಿಂತಿಹೆ ಸನಿಹದಲ್ಲೆ

ಹೇಳೆ ನನ್ನ ಕೋಮಲೆ ?

 

ಮನದ ಮೂಲೆಲಿ ಪ್ರೇಮದೊರತೆಯ

ಚಿಮ್ಮಿಸಿ ನೀ ದೂರ ಸಾಗಿದೆ

ನನ್ನ ಮರೆತರೂ ನಿನ್ನ ಮರೆಯದೆ

ಜೀವ ಸವೆಸಲು ಸಾಧ್ಯವಾಗದೆ

ನಿನ್ನ ಹುಡುಕಲು ಪ್ರೀತಿ ಉಸಿರನೆ

ಕಳಿಸುತಿರುವೆನು ನನ್ನ ಚೆಲುವೆಯೆ

ಹೇಳು ನನ್ನ ಕೋಮಲೆ ?

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ