ಉದ್ದನೆಯ ಕೂದಲ ಸವರಿ,ನೋಡುತಿರುವೆ ಯಾಕೆ
ಮೋಹ ಉದಿಸಿ ಬೇಡುತಿರಲು,ನಗುತಿರುವೆ ಯಾಕೆ
ಸೊಂಟವನ್ನು ತಿರುಗಿಸುತ್ತಾ, ನನ್ನೆದುರು ನಡೆದೆ ಏಕೆ
ಹೊಟ್ಟೆ ಉರಿಸಿ ತಲೆಯ ಕೆಡಿಸಿ,ತಿರುಗುತಿರುವೆ ಯಾಕೆ
ಬರಿಯಾಸೆ ನನ್ನೊಳು ಮೂಡಿಸಿ,ಮರೆಯಲ್ಲೆ ನಿಂತೆ
ಗತಿಯಿರದವ ಎನ್ನುತ ಛೇಡಿಸಿ,ಕಾಡುತಿರುವೆ ಯಾಕೆ
ಜನುಮದ ಜೋಡಿಯಾಗಿ,ನಮಗೆ ಬಾಳಲು ಆಯಿತೆ
ಬರಿದೇ ದ್ವೇಷವ ತುಂಬಿ,ಕಾಳಗ ಮಾಡುತಿರುವೆ ಯಾಕೆ
ವಂಶವೃಕ್ಷ ಅರಳಲು ನಾನಂದು, ಮದುವೆಯಾದೆ ಈಶ
ಸಂಸ್ಕಾರವನ್ನೇ ತಿಳಿಯದ ಹೆಣ್ಣಾಗಿ,ಓಡುತಿರುವೆ ಯಾಕೆ
-ಹಾ.ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!