ಯಾರ ಮನೆಯ ಕದವ ತಟ್ಟಿ, ಕೇಳಬೇಕು ರಮಣಿ

ನಿನ್ನ ಒಲುಮೆ ಅಲ್ಲೆ ಇಹುದೆ, ಬಾಳಬೇಕು ರಮಣಿ

 

ಬೆನ್ನು ತಟ್ಟಿ ನುಡಿದ ಮಾತು,ಅಲ್ಲೆ ಮರೆತೆ ಯಾಕೆ

ಚೆಲೂವು ಉಂಡ ನನ್ನ ಮನಸ, ಕಾಡಬೇಕು ರಮಣಿ

 

ಸಾಲ ಸೋಲ ಮಾಡಿ ಅಂದು,ಮನೆಯ ಕಟ್ಟಿ ನಲಿದೆ

ನಿಲಯದೊಳಗೆ ಬರಲೆ ಇಲ್ಲ,ಬಾಗಬೇಕು ರಮಣಿ

 

ಶಕ್ತನಾಗಿ ಇರುವೆ ನಾನು,ಕುಲಕೆ ಫಲವ ನೀಡು

ಒಲವ ಸುಧೆಯು ಸುತ್ತ ಹರಡೆ, ಹಾಡಬೇಕು ರಮಣಿ

 

ಕನಸ ಮುಂದೆ ನನಸು ಬರಲೂ,ಕಂಪು ಇರಲಿ ಈಶ

ಸಾವ ಮೊದಲೆ ನಿನ್ನನೊಮ್ಮೆ, ನೋಡಬೇಕು ರಮಣಿ

 

-ಹಾ. ಮ ಸತೀಶ ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ