ಈಗ ಊರಿನ ಮನೆಗಳಲ್ಲಿ ಗೋಡೆಗೆ ಬಣ್ಣ ಹಚ್ಚುತ್ತಿದ್ದಾನೆ ,ಜೊತೆಗಿದ್ದ ಗೆಳೆಯರು ಕೆಲವರು ಗದ್ದೆಯಲ್ಲಿ ಕಳೆ ತೆಗೆಯುತ್ತಿದ್ದಾರೆ ಅಡಿಕೆ ಹೆಕ್ಕುತ್ತಿದ್ದಾರೆ ಗಾರೆ ಕೆಲಸದಲ್ಲಿದ್ದಾರೆ, ಇವರ ಬದುಕು ಇಲ್ಲಿಗೆ ತಲುಪುತ್ತೆ ಅಂತ ಅವರ ಅಂದುಕೊಂಡಿದ್ದರು. ಆದರೆ ಶಾಲೆಯಲ್ಲಿರುವಾಗ ಅವರ ಪ್ರತಿಭೆಗಳನ್ನು ನೋಡಿ ಹಲವರು ಚಪ್ಪಾಳೆ ತಟ್ಟಿ ವೇದಿಕೆಯ ಮೇಲೆ ಅವರನ್ನು ಸನ್ಮಾನಿಸಿದ್ರು. ಅಭಿನಯ ನೃತ್ಯ ಹಾಡಿನಲ್ಲಿ ಎಲ್ಲದರಲ್ಲೂ ಬಹುಮಾನವನ್ನು ಪಡೆದುಕೊಂಡವರು. ಎಲ್ಲರೂ ಇವರ ಪ್ರತಿಭೆಯನ್ನು ಹೊಗಳಿ ಮುಂದೆ ಇಡೀ ರಾಜ್ಯವೇ ಮೆಚ್ಚುವ ಪ್ರತಿಭೆ ಇವರಾಗ್ತಾರೆ ಅಂತ ಕೊಂಡಾಡಿದವರು ಇವರು ವೇದಿಕೆ ಏರಿದರೆ ಸಾಕು ಎಲ್ಲರೂ ಕಣ್ಣು ಬಾಯಿ ಬಿಟ್ಟು ಇವರನ್ನೇ ಗಮನಿಸುವರು. ಇವರಿಗೆ ಅಭಿಮಾನಿಗಳ ಬಳಗವೇ ತುಂಬಿಕೊಂಡಿತ್ತು. ಆದರೆ ಮನೆಯ ಜವಾಬ್ದಾರಿ ಆ ಕನಸನ್ನ ನನಸಾಗೋದಕ್ಕೆ ಬಿಡಲೇ ಇಲ್ಲ. ಎಷ್ಟೇ ಪ್ರಯತ್ನಿಸಿದರು ಹೆಗಲು ಕೊಡಲೇಬೇಕಿತ್ತು ಮನೆಯವರ ಹಸಿವಿಗೆ. ಹಾಗಾಗಿ ಎಲ್ಲವನ್ನ ಬದಿಗಿಟ್ಟು ಈಗ ಬೆವರು ಹರಿಸುತ್ತಿದ್ದಾರೆ ತಾವು ವೇದಿಕೆಯಲ್ಲಿ ಕುಣಿದ ಹಾಡಿದ ನಲಿದ ಕ್ಷಣಗಳು ಈಗ ಅವರ ನೆನಪಿನಲ್ಲಿ ಇಲ್ಲ ಪ್ರತಿದಿನದ ದುಡಿಮೆಯೇ ಅವರ ಜೀವನವಾಗಿದೆ...ನೋವಿಲ್ಲ ಒಪ್ಪಿಕೊಂಡಿದ್ದಾರೆ ಬದುಕನ್ನ…
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!