ಮನುಷ್ಯ ನೀನು ನನ್ನ ಸೃಷ್ಟಿ ತಾನೇ? ಮತ್ತೆ ಯಾಕೆ ಹೀಗೆ ಮಾಡುತ್ತಿದ್ದೀಯಾ? ನಾನು ನಿನ್ನನ್ನ ನೀನು ಮಾಡುತ್ತಿರುವ ಈ ವರ್ತನೆಗೆ ಸೃಷ್ಟಿಸಿರುವುದಲ್ಲ. ನೀನು ನಿನ್ನನ್ನು ಅರ್ಥ ಮಾಡಿಕೊಳ್ಳಬೇಕು. ನಿನ್ನನ್ನು ಯಾರಾದ್ರೂ ಗಮನಿಸ್ತಾ ಇದ್ರೆ ನಿನ್ನ ವರ್ತನೆಗಳು ಬದಲಾಗಿರುತ್ತದೆ, ನೀನು ತುಂಬಾ ಸಭ್ಯವಾಗಿರುತ್ತೀಯಾ, ಎಲ್ಲರಿಗೂ ಒಳ್ಳೇದನ್ನೇ ಮಾಡ್ತೀಯಾ ಯಾರು ಇಲ್ಲದಿದ್ದಾಗ ಸಿಸಿ ಕ್ಯಾಮರಗಳಿದೆ ಅಂದ ತಕ್ಷಣ ನಿನ್ನ ನಡವಳಿಕೆಗಳೇ ಬದಲಾಗಿಬಿಡುತ್ತವೆ. ಹಾಗಾಗಿ ನಿನ್ನನ್ನ ಗಮನಿಸುವವರಿದ್ದಾಗ ನೀನು ಬೇರೆಯ ವ್ಯಕ್ತಿಯ ಹಾಗೆ ಇರುತ್ತೀಯಾ? ಹಾಗೆಯೇ ನಾನು ನಿನ್ನನ್ನು ಪ್ರತಿದಿನ ಗಮನಿಸ್ತಾ ಇದೇನಪ್ಪ ಆದರೆ ನೀನು ಬದಲಾದದ್ದು ನಾನು ಕಾಣಲೇ ಇಲ್ಲ. ನಿನ್ನೊಳಗಿರುವ ದುಷ್ಟತನ ಅಸೂಯೆ ಅಹಂಕಾರ ಇದ್ಯಾವುದನ್ನು ನೀನು ಕಡಿಮೆ ಮಾಡಿಕೊಂಡಿಲ್ಲ ಯಾಕೆ? ನಿನಗೆ ನಾನು ನಿನ್ನ ನೋಡುತ್ತಿದ್ದೇನೆ ಅನ್ನುವ ಭಾವ ಒಂದು ದಿನ ಬರಲಿಲ್ಲ. ತಪ್ಪುಗಳನ್ನ ಮಾಡುವಾಗ ತೊಂದರೆಗಳನ್ನು ಕೊಡುವಾಗ ಆ ಭಾವ ಮನಸ್ಸಿನೊಳಗೆ ಬಂದರೆ ನೀನು ಉತ್ತಮನಾಗಿರುತ್ತೀಯಾ? ನನಗೊಂದು ಸಲ ನನ್ನ ಸೃಷ್ಟಿ ನೀನೇನಾ ಅನ್ನೋ ಸಂಶಯ ಕಾಡ್ತಾ ಇದೆ. ಇದಕ್ಕೆ ನಿನ್ನ ಉತ್ತರವೇನು?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!