ರಮೇಶ ದೊಡ್ಡ ಕೆಲಸದಲ್ಲಿ ಮುಳುಗಿಬಿಟ್ಟಿದ್ದಾನೆ. ಮನೆಯ ಜವಾಬ್ದಾರಿ ಹೆಚ್ಚಿದ್ದು ಮಕ್ಕಳ ಕನಸು ದೊಡ್ಡದಿತ್ತು. ಕೈಹಿಡಿದು ಬಂದವಳ ನಂಬಿಕೆ ಉಳಿಸುವುದಕೋಸ್ಕರ ರಾತ್ರಿ ಹಗಲೆನ್ನದೆ ಕೆಲಸ ಮಾಡುವುದಕ್ಕೆ ಶುರು ಹಚ್ಚಿಕೊಂಡ. ಕೆಲಸದ ನಡುವೆ ಮನೆಯವರ ಮಾತಿಗೆ ಕಿವಿಯಾಗುವುದ್ದಕ್ಕೆ ಸಾಧ್ಯನೇ ಆಗ್ಲಿಲ್ಲ. ವಾರಾಂತ್ಯದಲ್ಲಿ ಸಿಕ್ತಾ ಇದ್ದವನು ಆ ದಿನವು ಕೆಲಸದ ಒತ್ತಡದಲ್ಲಿ ಮುಳುಗಿ ಹೋಗಿದ್ದ ಅಪ್ಪ ಆತನ ಜೊತೆ ಮಾತನಾಡಬೇಕು ಅಂದುಕೊಂಡಿದ್ದವರು ಕಾಯುತ್ತಾ ಕುಳಿತುಬಿಟ್ರು. ವರ್ಷಗಳು ದಾಟಿಹೋಯಿತು ಕನಸುಗಳು ದೊಡ್ಡದಾಯಿತು ಕೆಲಸ ನಿಲ್ಲಲೇ ಇಲ್ಲ. ಮನೆಯವರಿಗೆ ಮುಖ ಪರಿಚಯವೇ ಮರೆತು ಹೋಗುವಷ್ಟು. ಒಂದು ದಿನ ದೊಡ್ಡ ಅಪಘಾತದಲ್ಲಿ ಜೀವ ಕಳೆದುಕೊಂಡು ಬಿಟ್ಟಿದ್ದ. ಮನೆಯವರಿಗೆ ಆತನ ಅಗಲಿಕೆ ದೊಡ್ಡದೇನು ಅನ್ನಿಸಿರಲಿಲ್ಲ. ಮುಂದೆ ಮುಖ ನೋಡೋದಕ್ಕೆ ಸಾಧ್ಯವಾಗಲ್ಲ ಅನ್ನಿಸಿಬಿಟ್ಟಿತು. ಕೊನೆಯ ಉಸಿರು ನಿಲ್ಲಿಸುವ ಲಕ್ಷಣದಲ್ಲಿ ಮನೆಯವರ ಜೊತೆ ಕಾಲ ಕಳಿಬೇಕಿತ್ತು ಅಂತ ಅಂದುಕೊಂಡಿರುವಾಗ ಕಾಲ ಕಳೆದು ಹೋಗಿತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!