ವಯಸ್ಸು ನಿಲ್ಲುವುದಿಲ್ಲ ನೋಡಿ. ಅದು ಓಡ್ತಾನೆ ಇರುತ್ತೆ. ಮೊದಲಾದರೆ ಮನೆಯಲ್ಲಿ ಒಂದಷ್ಟು ಮಾತುಗಳನ್ನ ಕೇಳ್ತಾ ಇದ್ರು, ಆದರೆ ಈಗೀಗ ಮಕ್ಕಳಿಗೆ ಅವರ ತಲೆಯಲ್ಲಿ ತಾವು ಓದಿದ್ದೇವೆ ಜಗತ್ತಿನ ಪರಿಜ್ಞಾನ ಇದೆ ಮುಂದೆ ಹೇಗೆ ವರ್ತಿಸಬೇಕು ಅನ್ನೋದು ತಿಳಿದಿದೆ ಅನ್ನುವ ಒಂದು ಪುಟ್ಟ ಆಲೋಚನೆ ಗಟ್ಟಿಯಾಗಿ ಕೂತುಬಿಟ್ಟಿದೆ. ಹಾಗಾಗಿ ಈಗ ಮಕ್ಕಳು ಮಾತು ಕೇಳುತ್ತಿಲ್ಲ. ಸರಿ ತಪ್ಪುಗಳನ್ನ ತಿದ್ದಿ ಹೇಳೋಕೆ ಶುರು ಮಾಡಿದರೆ ನಮ್ಮ ಮೇಲೆ ಸಿಟ್ಟುಗೊಳ್ಳುತ್ತಾರೆ ನಮಗೆ ಲೋಕದ ಜ್ಞಾನ ಇಲ್ಲ ಅಂತ ಹಂಗಿಸುತ್ತಾರೆ ಹಾಗಾಗಿ ಅಮ್ಮ ಮಾತಾಡೋದನ್ನ ಬಿಟ್ಟಿದ್ದಾಳೆ. ತಪ್ಪಾದರೂ ಸಹಿಸಿಕೊಂಡಿದ್ದಾಳೆ ಮಕ್ಕಳು ಸೋತಾಗ ಬೇಸರಿಸಿದ್ದಾಳೆ ಎಷ್ಟೆಂದರೂ ಆಕೆ ಅನುಭವವನ್ನು ಪಡೆದವಳು. ಮಕ್ಕಳಿಗೆ ಇನ್ನೂ ಅರ್ಥವಾಗಿಲ್ಲ ಅಮ್ಮ ಯಾಕೆ ಈಗ ಮೌನವಾಗಿದ್ದಾರೆ ಅಂತ ಮಕ್ಕಳು ಅಂದುಕೊಂಡಿದ್ದಾರೆ ಅಮ್ಮನಿಗೆ ಆಧ್ಯಾತ್ಮಿಕ ಯೋಚನೆ ಶುರುವಾಗಿದೆ ಅಂತ ನಿಜವಾಗಲೂ ಅಮ್ಮನಿಗೆ ಮಕ್ಕಳ ಬದುಕಿನ ಬಗ್ಗೆ ಚಿಂತೆಯಾಗಿದೆ ಅಷ್ಟೇ....

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ