ಹವ್ಯಕ ಮಹಾಜನ ಸಭಾದ "ಮಂಗಳೂರು ಹವ್ಯಕ ವಾರ್ತೆ"

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾ (ರಿ) ಕಳೆದ ಹದಿಮೂರು ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಮಂಗಳೂರು ಹವ್ಯಕ ವಾರ್ತೆ". ೨೦೧೩ರಲ್ಲಿ, ಹವ್ಯಕ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಮಹಾಜನ ಸಭಾವು ಪತ್ರಿಕೆಯನ್ನು ಆರಂಭಿಸಿತು. ನಂತೂರು ಭಾರತಿ ವಿದ್ಯಾರ್ಥಿ ನಿಲಯದಲ್ಲಿ ಸಭಾ ಮತ್ತು ಪತ್ರಿಕೆಯ ಕಚೇರಿಯಿದೆ. ರಾಮ ಭಟ್ ಎನ್. ಮುದ್ರಕರಾಗಿದ್ದು, ಬೈಕಂಪಾಡಿಯ ನೆಡ್ ಪ್ರಿಂಟ್ ನಲ್ಲಿ ಮುದ್ರಣವಾಗುತ್ತಿದೆ.

ಹದಿನಾರು ಪುಟಗಳೊಂದಿಗೆ ಪುಸ್ತಕ ರೂಪದಲ್ಲಿ ಹೊರಬರುತ್ತಿರುವ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೧೫ ರೂಪಾಯಿ. ವಾರ್ಷಿಕ ಚಂದಾ ೧೫೦ ರೂಪಾಯಿಗಳು. ಪ್ರಸ್ತುತ, ಕೊಲ್ಲರಮಜಲು ಶಂಕರ ಭಟ್ ಗೌರವ ಸಂಪಾದಕರು. ಶಿವ ಪ್ರಸಾದ್ ಬದಿಯಡ್ಕ ಪ್ರಧಾನ ಸಂಪಾದಕರು. ನಿಡುಗಳ ಕೃಷ್ಣ ಭಟ್ ಹಾಗೂ ಶ್ರೀಕೃಷ್ಣ ನೀರಮೂಲೆ ಸಂಪಾದಕ ಮಂಡಳಿ ಸದಸ್ಯರು. ಶ್ರೀಮತಿ ಪಾರ್ವತಿ ಮೋಂತಿಮಾರು, ಕೆ. ಸುಬ್ರಹ್ಮಣ್ಯ ಶಾಸ್ತ್ರಿ, ಎ. ವಿ. ಶ್ರೀಧರ ಹಾಗೂ ಶ್ರೀಮತಿ ಸುಕನ್ಯಾ ಭಟ್ ಉರಿಮಜಲು ಸಂಚಾಲಕರಾಗಿದ್ದಾರೆ. ಮಹಾಜನ ಸಭಾದ ವರದಿಗಳು, ಸಮಾಜ ಬಾಂಧವರಿಗೆ ಅಗತ್ಯವಿರುವ ಮಾಹಿತಿಗಳು ಮತ್ತು ಲೇಖನಗಳು ಪತ್ರಿಕೆಯಲ್ಲಿರುತ್ತವೆ.

~ ಶ್ರೀರಾಮ ದಿವಾಣ