ಶ್ರೀ ಅಖಿಲ ಹವ್ಯಕ ಮಹಾಸಭಾದ "ಹವ್ಯಕ"

ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ಬೆಂಗಳೂರು ಇವರು ೧೯೪೩ರಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಹವ್ಯಕ". ಮಹಾಸಭಾದ ಕೇಂದ್ರ ಕಚೇರಿ ಇರುವ ಬೆಂಗಳೂರು ಮಲ್ಲೇಶ್ವರ ೮ ನೇ ಮುಖ್ಯರಸ್ತೆ ೧೧ನೇ ಅಡ್ಡರಸ್ತೆಯಲ್ಲಿರುವ ಕಟ್ಟಡದಲ್ಲಿಯೇ ಪತ್ರಿಕಾ ಕಚೇರಿಯೂ ಇದೆ.

ಮಹಾಸಭಾದ ಮುಖವಾಣಿಯಾಗಿರುವ " ಹವ್ಯಕ"ವು, ಸಾಹಿತ್ಯ, ಸಂಸ್ಕೃತಿ, ಕಲೆಗಳಿಗೆ ಸಂಬಂಧಿಸಿದ ಬರೆಹಗಳಿಗೂ ಆದ್ಯತೆ ನೀಡಿ ಪ್ರಕಟಿಸಿಕೊಂಡು ಬರುತ್ತಿದೆ. ೬೪ ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗುವ "ಹವ್ಯಕ" ಮಾಸಪತ್ರಿಕೆಯು ಬೆಂಗಳೂರು ಶಂಕರಪುರ ಶಂಕರಮಠ ರಸ್ತೆಯ ಸ್ಟ್ಯಾಂಡರ್ಡ್ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದೆ.

ಶ್ರೀಕಾಂತ ಹೆಗಡೆ ಅಂತ್ರವಳ್ಳಿ ಸಂಪಾದಕರು. ಕೃಷ್ಣಮೂರ್ತಿ ಮುಗಲೋಡಿ, ಕಮಲಾಕ್ಷಿ ಹೆಗಡೆ ದುಗ್ಗೂರು, ಸಂದೇಶ ತಲಕಾಲಕೊಪ್ಪ ಹಾಗೂ ವಿ | ಲೋಹಿತ ಶರ್ಮಾ ಇಡುವಾಣಿ ಸಂಪಾದಕ ಮಂಡಳಿ ಸದಸ್ಯರು. ಸುಜಾತಾ ಹೆಗಡೆ ಬೆಂಗಳೂರು ಪತ್ರಿಕೆಯ ಮುಖಪುಟ ವಿನ್ಯಾಸಕರು (೨೦೧೮).

೨೦೧೭ರಲ್ಲಿ ವಿ || ಶಂಕರ ಭಟ್ಟ ಮಾಡಂಗಾಯ, ಪೂರ್ಣಿಮಾ ಹೆಗಡೆ ನೀಲ್ಕೋಡು ಹಾಗೂ ವಿ || ವೆಂಕಟರಮಣ ಭಟ್ಟ ಯಲೂಗಾರ ಸಂಪಾದಕ ಮಂಡಳಿ ಸದಸ್ಯರಾಗಿದ್ದರು. ಉದಯಕೃಷ್ಣ ಜಿ ಮುಖಪುಟ ವಿನ್ಯಾಸಕರಾಗಿದ್ದರು. ಭಾರತಿ ಎಂ. ಪಿ. ಮುಟುಗುಪ್ಪೆ ಪುಟ ವಿನ್ಯಾಸಕರಾಗಿದ್ದರು.

"ಹವ್ಯಕ"ವನ್ನು ಮುನ್ನಡೆಸುವಲ್ಲಿ ಪತ್ರಿಕಾ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಡಾ || ಸೂರ್ಯನಾರಾಯಣ ಭಟ್ಟ ಹಿತ್ಲಳ್ಳಿ ಹಾಗೂ ಡಾ || ಗಜಾನನ ಶರ್ಮಾ ಹುಕ್ಕಲು ಗೌರವ ಸಲಹೆಗಾರರು. ನಾರಾಯಣ ಭಟ್ ಹುಳೇಗಾರು ಸಂಚಾಲಕರು. ನಾರಾಯಣ ಜಿ. ಭಾಗ್ವತ್, ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ ಹಾಗೂ ಉದಯಕೃಷ್ಣ ಜಿ. ಸಂಚಾಲನಾ ಸಮಿತಿ ಸದಸ್ಯರಾಗಿದ್ದಾರೆ. ಸಂಪಾದಕ ಮಂಡಳಿ ಮತ್ತು ಪತ್ರಿಕಾ ಸಮಿತಿಯಲ್ಲಿ ಕಾಲಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ.

~ ಶ್ರೀರಾಮ ದಿವಾಣ