ಅವನು ವಾದವನ್ನು ನಿಲ್ಲಿಸುತ್ತಿರಲಿಲ್ಲ. ಯಾರೆಷ್ಟೇ ಹೇಳಿದ್ರು ಅವನಿಗೆ ಅವನು ಹೇಳಿದ್ದೆ ಸತ್ಯ, ಇಲ್ಲಿ ಯಾರೂ ಅವಕಾಶವನ್ನ ಕೊಡುವುದಿಲ್ಲ, ನಾವೆಷ್ಟೇ ಪ್ರಯತ್ನ ಪಟ್ಟರು ಯಾರು ಕೈ ಹಿಡಿದು ಮೇಲೆತ್ತೋದಿಲ್ಲ ನಮ್ಮ ಬದುಕನ್ನ ನಾವೇ ಕಟ್ಟಿಕೊಳ್ಳಬೇಕು, ನಮ್ಮ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕೊಟ್ಟು ನಮ್ಮನ್ನ ಎತ್ತರಕ್ಕೇರಿಸುವ ಆಲೋಚನೆಗಳು ಯಾರದ್ದೂ ಇಲ್ಲ. ಇಂತಹ ಜಗತ್ತಲ್ಲಿ ಬದುಕಿ ಮಾಡೋದಕ್ಕಾದರೂ ಏನು? ಭಾಷಣದಲ್ಲಿ ಹೇಳೋದು ಸುಲಭ. ಮೊದಲು ಅವರು ಜೀವನದಲ್ಲಿ ಬದುಕಿ ತೋರಿಸಲಿ. ಅವಕಾಶ ಕೈ ತಪ್ಪಿದಾಗ, ಬಹುಮಾನಗಳು ಸಿಗದೇ ಇದ್ದಾಗ ಇದೇ ಮಾತುಗಳನ್ನು ಸಚಿನ್ ಹೇಳುತ್ತಾನೆ ಇದ್ದ. ಪ್ರತೀ ಸಲವೂ ಅಪ್ಪ ಅದನ್ನ ಕೇಳಿ ಹೇಳುತ್ತಿದ್ದದ್ದು ಒಂದೇ ಮಾತು ಮಗು ನಿನಗೆ ಎಷ್ಟು ಹೇಳಿದರು ಅರ್ಥ ಆಗೋದಿಲ್ಲ "ದೀಪಾ ಆರಿದೆ ಅಂತಂದ್ರೆ ಪ್ರತಿಸಲನೂ ಗಾಳಿಯೇ ಕಾರಣವಾಗಬೇಕಿಲ್ಲ ಸುರಿದ ಎಣ್ಣೆಯು ಖಾಲಿಯಾಗಿ ಬಿಟ್ಟರೆ ದೀಪ ಆರಿ ಹೋಗಬಹುದು. ನಿನ್ನೊಳಗಿನ ಪ್ರತಿಭೆ ಜ್ಞಾನ ಪರಿಶ್ರಮದ ಎಣ್ಣೆ ಖಾಲಿಯಾಗಿದೆಯೋ ಅಥವಾ ಮೋಸದ ಗಾಳಿ ಬೀಸುತ್ತಿದಯೋ ನೋಡು ಅಂತ ಮಗನಿಗೆ ಕೇಳುವಾಗ ಹೌದೆನಿಸಿದರು ಮೊಂಡುವಾದ ನಿಲ್ಲಲೇ ಇಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ