ಪ್ರತೀ ದಿನ ರಾತ್ರಿ 12 ಕ್ಕೆ ರಾಜೇಶನ ಮೊಬೈಲ್ ಗೆ ಮೆಸೇಜ್ ಒಂದು ಬರುತ್ತದೆ. ಚೆನ್ನಾಗಿದ್ದೀಯಾ? ಕನಸುಗಳು ನನಸಾಯ್ತ? ಆದರೆ ಮೊಬೈಲ್ ಸಂಖ್ಯೆ ಯಾರದೆಂದು ಗೊತ್ತಾಗುತ್ತಿಲ್ಲ ಮತ್ತದೇ ಸಂದೇಶ ಹರಿದಾಡುತ್ತಿದೆ. ಹುಡುಕಾಟದ ಪಯಣ 5 ವರ್ಷಗಳ ಹಿಂದಿನ ಅವನ ಮನೆಗೆ ತಲುಪಿದೆ. ಉಸಿರು ನಿಲ್ಲಿಸುವ ಕೊನೆಯ ಕ್ಷಣದಲ್ಲಿ ಅಮ್ಮ ಹೇಳಿದ ಮಾತಿದು. ಆದರೆ ಈ ಸಂದೇಶ ಮೊಬೈಲಿಗೆ ತಲುಪಿದ್ದು ಹೇಗೆ ಅನ್ನೋದು ಇನ್ನು ತಿಳಿಯುತ್ತಿಲ್ಲ. ಅಮ್ಮನ ಬಳಿ ಯಾವುದೇ ಮೊಬೈಲ್ ಇರಲೇ ಇಲ್ಲ. ಇಷ್ಟು ದಿನ ಎಲ್ಲ ಸಂದೇಶವನ್ನು ಬರಿಯ ಕೇಳುತ್ತಿದ್ದವ ಕೆಲಸದ ಕಡೆಗೆ ಶುರು ಹಚ್ಚಿಕೊಂಡು ಬಂದಷ್ಟು ಹೆಜ್ಜೆ ದೂರ ಇಡೋದಕ್ಕೆ ಆರಂಭ ಮಾಡಿದ. ಸಾಧನೆಗಳು ಪ್ರಸಿದ್ಧವಾಗ್ತಾ ಹೋದ ಹಾಗೆ ಮೆಸೇಜುಗಳು ಬರುವುದು ನಿಂತು ಬಿಟ್ಟವು. ಇನ್ನು ಕೂಡ ರಾಜೇಶ ಯೋಚಿಸುತ್ತಿದ್ದಾನೆ ಸಂದೇಶ ಕಳುಹಿಸಿದವರಾರೆಂದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!