ಅವಳ ಕಣ್ಣಂಚಲ್ಲಿ ಪುಟ್ಟ ಕಣ್ಣೀರೊಂದು ಅವಳ ಕೆನ್ನೆಯನ್ನ ಸ್ಪರ್ಶಿಸುತ್ತಾ ಜಲಪಾತದಂತೆ ಕೆಳಗಿಳಿಯಲು ಕಾಯುತ್ತಿದೆ. ಆ ಮನೆಯ ಒಳಗೆ ಕುಳಿತವಳ ಬಳಿಗೆ ಬಳೆ ತೋಡಿಸುವವರು ಬಂದಿದ್ದಾರೆ. ಆಕೆಯಲ್ಲಿ ಅಂತಹ ಸಾವಿರ ಬಳೆಗಳನ್ನು ಕೊಳ್ಳುವ ಶಕ್ತಿ ಇದೆ. ಹಾಕಿಕೊಂಡಿದ್ದಾಳೆ ಕೂಡ ಆದರೂ ಆ ವಿಶೇಷ ಕ್ಷಣಕ್ಕೆ ಆಕೆ ಕಣ್ಣೀರಾಗುತ್ತಾಳೆ. ಆಕೆಯ ಬದುಕಿನ ಎಲ್ಲ ಕ್ಷಣಗಳಲ್ಲಿ ಹಾದು ಹೋದವರು ಇದ್ದರೂ ಕೂಡ ಯಾರು ಆಕೆಯಿದ್ದ ಬಳಿಗೆ ಬಳೆಗಾರರನ್ನ ಕರೆಸಿ, ಅವಳ ಮುದ್ದಿನ ಕೈಗೆ ಆಯ್ಕೆಯಾಗುವ ಬಳೆಯನ್ನ ತೊಡಿಸಿದವರು ಇರಲಿಲ್ಲ. ಆಕೆಯ ಜೀವನದ ಅದ್ಭುತ ದಿನಗಳೆಲ್ಲವೂ ದಾಟಿಹೋಗಿದ್ದವು. ಮತ್ತೆ ಇಂತಹ ಕ್ಷಣಗಳು ಬರುವುದಿಲ್ಲ ಅಂದುಕೊಂಡವಳ ಬದುಕಲ್ಲಿ ಆ ಬದುಕಿನ ರಸ ನಿಮಿಷಗಳನ್ನು ಮತ್ತೆ ನೆನಪಿಸುವುದಕ್ಕೆ ಬಂದವು. ಆಕೆಗೆ ಬದುಕಿನ ಸಾರ್ಥಕತೆಯ ಒಂದು ಕ್ಷಣ ಕಣ್ಣ ಮುಂದೆ ದೊರೆಯಿತು. ನನ್ನೆದುರು ನಿಂತ ಆಕೆ ಹೇಳಿದ್ದು ಹಲವರಿಗೆ ಅವರ ಬದುಕಿನ ಪುಟ್ಟ ಪುಟ್ಟ ಆಸೆಗಳು ಹಾಗೆ ಉಳಿದಿರುತ್ತದೆ ನಿಮ್ಮಿಂದ ಸಾಧ್ಯವಾದರೆ ಅವರ ಬದುಕಿನ ಸಾರ್ಥಕ ಕ್ಷಣಗಳು ಅವರ ಕಣ್ಣ ಮುಂದೆ ಬಂದು ನಿಲ್ಲಬಹುದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!