ಊರಿನ ಅಂಚಿನಲ್ಲಿ ರಾಮಯ್ಯನ ಮನೆ ಅವನು ದಿನವಿಡೀ ದೀಪಗಳನ್ನು ತಯಾರಿಸುತ್ತಿದ್ದ. ಹಬ್ಬ ಬಂದಾಗಲಂತೂ ಅವನ ಕೈಯಿಂದ ಮಾಡಿದ ದೀಪಗಳು ಊರಿನ ಪ್ರತಿಯೊಂದು ಮನೆಯನ್ನೂ ಬೆಳಗಿಸುತ್ತಿದ್ದವು. ಎಲ್ಲರೂ ಅವನನ್ನು "ಬೆಳಕಿನಜ್ಜ" ಅಂತ ಕರೆಯುತ್ತಿದ್ದರು. ಆದರೆ ಅವನ ಮನೆಯೊಳಗೆ ಮಾತ್ರ ಕತ್ತಲೆ.
ರಾಮಯ್ಯನಿಗೆ ಹೆಂಡತಿ ಇಲ್ಲ, ಮಕ್ಕಳು ಇಲ್ಲ. ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ಮಗನ ನೆನಪಿನಲ್ಲಿ ಅವನ ಹೃದಯ ಖಾಲಿಯಾಗಿತ್ತು. ದಿನವೂ ಸಾವಿರ ದೀಪಗಳನ್ನು ಹಚ್ಚುವ ಕೈಗಳು, ತನ್ನ ಮನದ ಕತ್ತಲೆಯನ್ನು ಮಾತ್ರ ದೂರ ಮಾಡಲಾಗಲಿಲ್ಲ.ಒಂದು ದಿನ ಹಬ್ಬದ ರಾತ್ರಿ, ಊರಿನ ಎಲ್ಲ ಮನೆಗಳು ಹೊಳೆಯುತ್ತಿದ್ದವು. ಆದರೆ ರಾಮಯ್ಯನ ಮನೆ ಕತ್ತಲಲ್ಲಿ ಮೌನವಾಗಿತ್ತು. ಪುಟ್ಟ ಹುಡುಗನೊಬ್ಬ ಮನೆಯಂಗಳದ ದೀಪವ ಬೆಳಗಿ. "ಅಜ್ಞಾ ನೀವು ಎಲ್ಲರಿಗೂ ಬೆಳಕು ಕೊಡ್ತೀರಾ... ನಿಮ್ಮ ಮನೆಗೆ? ಹಚ್ಚಬಹುದಲ್ವೇ ನೀವೇ? ಆ ಒಂದು ಪ್ರಶ್ನೆ... ದೀಪ ಹಚ್ಚೋದು ಕೇವಲ ಕೈಯ ಕೆಲಸ ಅಲ್ಲ, ಮನಸ್ಸಿನ ಕೆಲಸವೂ ಆಗಬೇಕು.ಆ ದಿನದಿಂದ, ರಾಮಯ್ಯ ತನ್ನ ಮನೆಯಲ್ಲೂ ಒಂದು ದೀಪ ಹಚ್ಚಲು ಶುರುಮಾಡಿದ. ಮನೆ ನಿಧಾನವಾಗಿ ಬೆಳಗತೊಡಗಿತು... ಹೃದಯವೂ ಸಹ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!