ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ನೆಲದಿ

ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ಕೊಟ್ಟಿಹ ನೆಲದಿ

 

ಕೊಳೆಯ ತೊಳೆದು ಸಾಗಿರೆಲ್ಲರು ಮತ್ತೆ ಸಂಶಯ ಯಾಕೆ 

ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿಹ ನೆಲದಿ

 

ನಿಶೆ ಹೊಂದದೆ ಬದುಕಿರೆಲ್ಲರು ಪಯಣ ಇರುವುದು ಏಕೆ 

ವಶಕೆ ಸಿಗದೆಲೆ ದುಡಿಯಿರೆಲ್ಲರು ಬದುಕ ನೆಟ್ಟಿಹ ನೆಲದಿ

 

ಕನಸ ದೇಶದಿ ಕಾಣಿರೆಲ್ಲರು ನನಸು ಬಾರದೆ  ಹೋದಿತೆ

ಹಸಿರ ಲೋಕದಿ ಹಾಡಿರೆಲ್ಲರು ಹುರುಪು ಹುಟ್ಟಿಹ ನೆಲದಿ 

 

ಮನದಿ ನೋಡಿರಿ ಈಶನ ಭವದ ಸುತ್ತಲು ಸವಿಯಿದೆ

ಮನೆಯ ಒಳಗಡೆ ಮಲಗಿರೆಲ್ಲರು ಬಯಕೆ ತಟ್ಟಿಹ ನೆಲದಿ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ