ಊರಿನ ಪರಿಸ್ಥಿತಿಯ ಕಂಡು ಆಗಾಗ ಬೇಸರಗೊಳ್ಳುತ್ತಾನೆ. ಇದನ್ನು ಬದಲಾಯಿಸಬೇಕು ಅಂತ ತುಂಬಾ ಸಲ ಯೋಚಿಸಿದ್ದಿದೆ. ಆದರೆ ರಾಜೇಶನಿಗೆ ಯಾವ ಅವಕಾಶವೂ ಸಿಕ್ಕಿರಲಿಲ್ಲ. ತನ್ನಿಂದಾಗಿ ತನ್ನ ಊರು ಬದಲಾಗಬೇಕು ಅಂತ ಹಠ ಕಟ್ಟಿ ಒಂದು ಪಕ್ಷದೊಳಗೆ ದುಡಿಯೋದಕ್ಕೆ ಆರಂಭಿಸಿದ. ದುಡಿಯುತ್ತ ಎಲ್ಲರ ಮೆಚ್ಚುಗೆಗೆ ಪಾತ್ರನಾದ. ಇಡೀ ಊರು ಆತನನ್ನ ನಾಯಕ ಅಂತ ಗುರುತಿಸುವುದಕ್ಕೆ ಆರಂಭವಾಯಿತು. ಆತನಿಗೆ ಜವಾಬ್ದಾರಿ ಕೊಟ್ಟರೆ ನಮ್ಮೂರು ಅಭಿವೃದ್ಧಿ ಹೊಂದಿದ ಪ್ರದೇಶವಾಗುವುದರಲ್ಲಿ ಅನುಮಾನ ಇಲ್ಲ ಅನ್ನೋದು ಪ್ರತಿಯೊಬ್ಬರಿಗೂ ಅರ್ಥವಾಯಿತು. ಈ ಸಲದ ಚುನಾವಣೆಯಲ್ಲಿ ತಾನು ವಿಜಯಿಯಾದರೆ ಏನೆಲ್ಲ ಕೆಲಸಗಳನ್ನ ಮಾಡಬೇಕು ಅಂತ ಪಟ್ಟಿ ತಯಾರಿ ಮಾಡಿಕೊಂಡ .ಆದರೆ ಚುನಾವಣೆಯ ಹೆಸರು ಘೋಷಣೆಯಾದಾಗ ಆತ ಅವರ ಆಯ್ಕೆಯ ಪಟ್ಟಿಯಲ್ಲಿ ಇರಲಿಲ್ಲ ರಾಜಕಾರಣವನ್ನ ವಂಶಪಾರಂಪರ್ಯಾವಾಗಿ ತಮ್ಮ ಕುತ್ತಿಗೆಗೆ ಬಳಿದುಕೊಂಡು ಓಡಾಡುವ ರಾಜಕಾರಣಿಗಳ ಮೊಮ್ಮಗ ಈ ಸಲದ ಅಭ್ಯರ್ಥಿಯಾಗಿದ್ದ. ದುಡಿಯದೆ ದುಡ್ಡು ಮಾಡುವುದಕ್ಕೆ ಅವರು ಹೆಜ್ಜೆ ಇಟ್ಟಿದ್ದರು. ಆ ಊರಿನ ಇಂದಿನ ರಾಜಕೀಯ ಮುಖಂಡ ಊರ ಮಧ್ಯದಲ್ಲಿ ಭಾಷಣ ಮಾಡುತ್ತಿದ್ದ ಯುವಕರಿಗೆ ರಾಜಕೀಯ ಅಧಿಕಾರ ಸಿಗಬೇಕು ಅಂತ ಆದರೆ ಅದು ಅವರ ಮೊಮ್ಮಕ್ಕಳಿಗೆ ಅನ್ನೋದು ನಿಧಾನವಾಗಿ ಅರ್ಥವಾಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!