ಹೆಸರಿಲ್ಲದ ಕಾಡೊಂದು ನೆಮ್ಮದಿಯಾಗಿ ನಿಂತಿತ್ತು. ಯಾರ ಹಂಗೂ ಇಲ್ಲ, ಯಾರ ಆಸರೆ ಇಲ್ಲದೇ, ಅದರೊಳಗೆ ಹಕ್ಕಿಗಳ ಕೂಗು ಬೆಳಗ್ಗನ್ನು ಎಬ್ಬಿಸುತ್ತಿತ್ತು, ಜಿಂಕೆ, ಮೊಲ, ನದಿ, ಪ್ರಾಣಿಗಳ ಓಟ ಸಂಜೆ ಗಾಳಿಯ ಜೊತೆ ನೃತ್ಯ ಮಾಡುತ್ತಿತ್ತು, ಹುಲಿಯ ಹೆಜ್ಜೆಗೂ, ಚಿಟ್ಟೆಯ ರೆಕ್ಕೆಗೂ ಒಂದೇ ಸ್ವಾತಂತ್ರ್ಯದ ಸ್ಪರ್ಶವಿತ್ತು. ಆ ಕಾಡಿಗೊಬ್ಬ ರಾಜನಿದ್ದ…

ಆದರೆ ಅವನು ಸಿಂಹಾಸನದ ಮೇಲೆ ಕುಳಿತವನಲ್ಲ, ಕಾಡಿನ ಪ್ರತಿಯೊಂದು ಎಲೆಗೂ ಕಾವಲು ನಿಂತವನಾಗಿದ್ದ.

ಅವನು ಒಂದು ನಿರ್ಧಾರ ಒಂದೇ

“ಈ ಕಾಡಿಗೆ ಹೆಸರು ಇರಬಾರದು.”

ಏಕೆಂದರೆ ಅವನಿಗೆ ಗೊತ್ತಿತ್ತು…

ಹೆಸರು ಬಂದರೆ ನಕ್ಷೆ ಬರುತ್ತದೆ,

ನಕ್ಷೆ ಬಂದರೆ ದಾರಿ ಬರುತ್ತದೆ,

ದಾರಿ ಬಂದರೆ ಮನುಷ್ಯ ಬರುತ್ತಾನೆ…

ಮನುಷ್ಯ ಬಂದರೆ? ಮರಗಳು ಬೀಳುತ್ತವೆ,

ನದಿಗಳು ಒಣಗುತ್ತವೆ, ಪ್ರಾಣಿಗಳು ಸಾಯುತ್ತವೆ.. ಇದು ಕಾಡಲ್ಲ, ಇದು ನೆಮ್ಮದಿ. ಹೆಸರಿಡದಂತೆ ನೋಡಿಕೊಂಡರು. ಕಾಡು ಮತ್ತೆ ಮೌನವಾಗಿ ಉಸಿರಾಡಿತು.

ಹೆಸರಿಲ್ಲದ್ದನ್ನು ಯಾರೂ ಹುಡುಕುವುದಿಲ್ಲ, ಹುಡುಕದ್ದನ್ನು ಯಾರೂ ಹಾಳುಗೆಡುವುದಿಲ್ಲ, ಅದಕ್ಕೇ,

ಆ ಕಾಡಿನ್ನೂ ಜೀವಂತವಾಗಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ