ಮಾವಿನ ಮರದ ಕೆಳಭಾಗದಲ್ಲಿ ತೂಗುತ್ತಿದ್ದ ಒಂದು ಮಾವಿನಕಾಯಿ ದಿನವೂ ಕಲ್ಲೇಟು ತಿನ್ನುತ್ತಾ ಕಳವಳದಿಂದಿತ್ತು.

“ನಾನು ಮೇಲ್ಬಾಗದಲ್ಲಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿತ್ತು! ಯಾರೂ ಕಲ್ಲು ಹೊಡೆಯುತ್ತಿರಲಿಲ್ಲ... ನಾನು ಹಣ್ಣಾಗಿ ಸುಖವಾಗಿ ಬಾಳುತ್ತಿದ್ದೆ,” ಅದೇ ಸಮಯದಲ್ಲಿ ಮರದ ತುದಿಯಲ್ಲಿ ಮೌನವಾಗಿ ತೂಗುತ್ತಿದ್ದ ಮತ್ತೊಂದು ಮಾವಿನಕಾಯಿ

“ನಾನು ಮೇಲಿದ್ದೇನೆ, ಯಾರೂ ತಲುಪಲಾರರು. ಕಲ್ಲು ಕೂಡ ತಲುಪುವುದಿಲ್ಲ. ಆದರೆ ನನ್ನ ಸಿಹಿ ಯಾರ ಹೊಟ್ಟೆಗೂ ಹೋಗುವುದಿಲ್ಲ. ನಾನು ಹಣ್ಣಾಗಿ ಬಿದ್ದರೂ ನೆಲದಲ್ಲೇ ಕೊಳೆಯುತ್ತೇನೆ. ನನ್ನ ಬದುಕಿಗೆ ಅರ್ಥವೇನು?” ಕೆಳಗಿನ ಮಾವಿನಕಾಯಿ ಕ್ಷಣಕಾಲ ನಿಶ್ಯಬ್ದವಾಯಿತು. ತನ್ನ ನೋವಿನ ನಡುವೆ ಒಂದು ಸತ್ಯ ಅರಿತುಕೊಂಡಿತು-ಕಲ್ಲೇಟು ತಿಂದರೂ, ನೋವು ಅನುಭವಿಸಿದರೂ, ಯಾರಿಗಾದರೂ ಉಪಯೋಗವಾದ ಬದುಕೇ ನಿಜವಾದದು.

“ನೋವು ಇದ್ದರೂ ಪರವಾಗಿಲ್ಲ... ಯಾರಿಗಾದರೂ ಸಿಹಿ ನೀಡುವ ಭಾಗ್ಯ ನನಗೆ ಸಿಕ್ಕಿದೆ.” ತನ್ನ ಸ್ಥಿತಿಯನ್ನ ಒಪ್ಪಿಕೊಂಡು ಸಂಭ್ರಮದಿಂದ ಕಲ್ಲೇಟನ್ನ ಆನಂದಿಸಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ