ಮಳೆಯು ಜೋರಾಗಿ ಸುರಿಯುತ್ತಿತ್ತು... ಬಸ್ ಬಾಗಿಲ ಬಳಿ ನಿಂತಿದ್ದನು ಅವನು.ಅವನ ದೇಹ ಸಂಪೂರ್ಣ ತೋಯ್ದಿತ್ತು...ಚಳಿಯಿಂದ ನಡುಗುತ್ತಿದ್ದನು...ಆದರೂ ಅವನ ಕಣ್ಣುಗಳಲ್ಲಿ ಸೋಲಿರಲಿಲ್ಲ.ಮನದೊಳಗೆ ಒಂದು ಯುದ್ಧ ನಡೆಯುತ್ತಿತ್ತು ಬಡತನದೊಂದಿಗೆ...

ಜವಾಬ್ದಾರಿಗಳೊಂದಿಗೆ...ಕುಟುಂಬದ ಕನಸುಗಳೊಂದಿಗೆ...ಬಸ್ ಒಳಗಿನವರು ಅವನನ್ನು ಕೇವಲ ಒಬ್ಬ ಪ್ರಯಾಣಿಕನಂತೆ ನೋಡಿದರೂ ಅವನು...ಒಂದು ಮನೆಯ ಆಧಾರ.ಅವನ ಮನಸ್ಸು ಹೇಳುತ್ತಿತ್ತು: “ಇಂದು ಕಷ್ಟ ಇದೆ...ಆದರೆ ನಾಳೆ ಬೆಳಕು ಬರಲಿದೆ.”ಮಳೆಯ ಹನಿ ಅವನನ್ನು ನೆನೆಸಿದರೂ...ಅವನ ಕನಸುಗಳನ್ನು ಕರಗಲಿಲ್ಲ.ಚಳಿ ಅವನ ದೇಹವನ್ನು ನಡುಗಿಸಿದರೂ...ಅವನ ಹೃದಯವನ್ನು ದುರ್ಬಲ ಮಾಡಲಿಲ್ಲ. ಅವನು ಬದುಕನ್ನು ಶಪಿಸಲಿಲ್ಲ... ಪ್ರೀತಿಸಿದನು.ಯಾಕೆಂದರೆ… ಅವನಿಗೆ ಗೊತ್ತು ಬದುಕು ನನ್ನದೇ…

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ