ದಸಂಸ ನಾಯಕ ಆರ್. ಮೋಹನ್ ರಾಜ್ ರವರ "ಭೀಮವಾದ".

ದಸಂಸ (ಭೀಮವಾದ)ದ ರಾಜ್ಯ ಪ್ರಧಾನ ಸಂಚಾಲಕರಾದ ಡಾ. ಆರ್. ಮೋಹನ್ ರಾಜ್ ಅವರು ಕಳೆದ ೧೬ ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ " ಭೀಮವಾದ". ಪತ್ರಿಕೆಯ ಸಂಪಾದಕರು, ಪ್ರಕಾಶಕರು ಮತ್ತು ಮಾಲಕರು ಮೋಹನ್ ರಾಜ್ ರವರೇ ಆಗಿದ್ದಾರೆ.

ಬೆಂಗಳೂರು ನಾಗಸಂದ್ರದಲ್ಲಿ ಪತ್ರಿಕಾಲಯವಿದೆ. ಮುರಳೀಧರ್ ಅವರು ಮುದ್ರಕರು. ೩೬ ಪುಟಗಳ "ಭೀಮವಾದ" ದ ಬಿಡಿ ಸಂಚಿಕೆಯ ಬೆಲೆ ೩೦ ರೂಪಾಯಿ. ವಾರ್ಷಿಕ ಚಂದಾ ಮೊತ್ತ ೫೦೦ ರೂಪಾಯಿ. ಮೂರು ವರ್ಷದ ಪ್ರೋತ್ಸಾಹ ಧನ ೧೫೦೦ ರೂಪಾಯಿ. ಆಜೀವ ಚಂದಾ ಮೊತ್ತ ೫೦೦೦ ರೂಪಾಯಿ ಮತ್ತು ಪೋಷಕ ಚಂದಾ ಮೊತ್ತ ೧೦ ಸಾವಿರ ರೂಪಾಯಿ.

ಡಾ. ಕೆ. ಎ. ಓಬಳೇಶ್, ಎಸ್. ಡಿ. ರಾಯಮಾನೆ, ರಾಜು ಎಂ. ತಳವಾರ್ ಹಾಗೂ ಡಾ. ಜಯದೇವಿ ಗಾಯಕವಾಡ ಅವರು ಸಹ ಸಂಪಾದಕರು. ಡಾ. ಬಿ. ಆರ್. ಅಂಬೇಡ್ಕರ್, ಗೌತಮ ಬುದ್ಧ ಸಹಿತ  ಸಮಾಜಸುಧಾರಕರ ಚಿಂತನೆಗಳು, ಪ್ರಚಲಿತ ವಿಚಾರಗಳ ಲೇಖನಗಳು, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿಶ್ಲೇಷಣೆಗಳ ಬರೆಹಗಳು "ಭೀಮವಾದ"ದಲ್ಲಿ ಆದ್ಯತೆಯಲ್ಲಿ ಪ್ರಕಟವಾಗುತ್ತವೆ.

~ ಶ್ರೀರಾಮ ದಿವಾಣ