ಗಂಟೆಯ ಮುಳ್ಳು ಚಲಿಸುತ್ತಿದ್ದಂತೇ ನನ್ನ ಸಾವಿನ ಸಮಯ ತಿಳಿಸುತ್ತಿದೆ ಪರಮಾತ್ಮ 

ಎನ್ನೊಳಗಿನ ಶಕ್ತಿಯು ಕುಂದಿದ ನೆನಪಿನಲ್ಲೇ ತನುವಿಂದು ಬದುಕುತ್ತಿದೆ ಪರಮಾತ್ಮ 

 

ಹೃದಯದ ನೋವುಗಳನ್ನು ಅರಿತುಕೊಳ್ಳದವರ ನಡುವೆ ನಾನಿರಬೇಕೆ

ಕಾತರವೆನಿಸುವ ಕ್ಷಣಗಳಲ್ಲಿ ಮೇಲಿರುವವರ ಕೂಗಿಂದು ಕೇಳಿಸುತ್ತಿದೆ ಪರಮಾತ್ಮ 

 

ಶಾಂತಿಯಿಂದಿರಿ ಎನ್ನುವ ಮಹಾತ್ಮರ ಮಾತುಗಳಿಗಿಂದು ಬೆಲೆಯಿದೆಯೆ

ಅವಸರವೆನ್ನುವ ನಿರ್ಣಯದಲ್ಲೇ ಜೀವವಿಂದು ಜೀವನವ ನಡೆಸುತ್ತಿದೆ ಪರಮಾತ್ಮ 

 

ಗತಿಗೆಟ್ಟಿರುವಂತಹ ಸಂಬಂಧಕ್ಕೆ ಮತ್ತೆಂದೂ ಮುಲಾಮನ್ನು ಹಚ್ಚಬೇಡ

ಹತ್ತಿರವಿದ್ದರೂ ದೂರದಲ್ಲಿರುವಂತೆ ನನ್ನೊಳಗಿನ ಮನಕ್ಕೇ ಅನಿಸುತ್ತಿದೆ ಪರಮಾತ್ಮ 

 

ಪಯಣಗಳೊ ನಾನೆಣಿಸಿದಂತೆ ವಾಸಿಸುತ್ತಿರುವ  ಬುವಿಯಲಿಲ್ಲ ಈಶ

ಬಾಳು ಮುಗಿಯುತ್ತದ್ದಂತೆಯೇ ನನ್ನೊಳಗಿನ ಆತ್ಮ ವೇಷವ ಕಳಚುತ್ತಿದೆ ಪರಮಾತ್ಮ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ