ಪ್ರೇಮದ ಹನಿಗಳ ನಡುವಲ್ಲಿ ಸುಖವೆ
ಜೀವನದ ಪದಗಳ ಜೊತೆಯಲ್ಲಿ ಸುಖವೆ
ಬಲವಿರದ ಬದುಕೊಳಗೆ ಬಾಳು ಬೆಳಗೀತೆ
ಚೈತ್ರದ ನಡುವೆಯೇ ಚೆಲುವಿನಲ್ಲಿ ಸುಖವೆ
ತಂಪಿರದ ಹೃದಯದಲಿ ಪ್ರೀತಿಯ ಅರಿವಿದೆಯೆ
ತಂಪಿನ ಹತ್ತಿರದ ಒಲವಿನಾಳದಲ್ಲಿ ಸುಖವೆ
ಬಯಕೆ ಕೊಡದ ಚಿತ್ತದಿ ನನಸು ಕಾಣುವುದೆ
ಫಲವೆನಿಸುವ ಸ್ವರದ ಆಳದಲ್ಲಿ ಸುಖವೆ
ಕನಸುಗಳು ಕಳೆದಾಗ ಸುಮ್ಮನಿರಲಾರ ಈಶ
ನನಸನ್ನು ಮರೆಯಲ್ಲೇ ಮರೆತಲ್ಲಿ ಸುಖವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!