ವೇದಿಕೆಯ ಮೇಲೆ ಬೆಳಕು ಮಿನುಗುತ್ತಿವೆ, ತಾಳಗಳು ಕುಣಿಯುತ್ತಿವೆ. ಜನರ ಕೂಗಾಟ, ನಗು, ಹರ್ಷ ಎಲ್ಲವೂ ಒಂದೇ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತಿವೆ. ಆದರೆ ಆ ಹಬ್ಬದ ವೇದಿಕೆಯ ಅಂಚಿನಲ್ಲಿ ಆ ಅಜ್ಜ ನಿಂತಿದ್ದಾನೆ. ಕೈಯಲ್ಲಿ ಹಳೆಯ ಜಾಡು, ಕಣ್ಣಲ್ಲಿ ಹೊಸ ಜಗತ್ತು. ಸ್ವಲ್ಪ ದೂರದಿಂದ ವೇದಿಕೆಯನ್ನು ನೋಡುತ್ತಾ ಮನಸ್ಸಿನಲ್ಲಿ ಏನೋ ಹಳೆಯ ನೆನಪುಗಳು ಮೂಡುತ್ತಿವೆ.

“ನಮ್ಮ ಕಾಲದಲ್ಲಿ ಇಂತಹ ಬೆಳಕು ಇರಲಿಲ್ಲ. ಆದ್ರೆ ಜನರ ಮುಖದಲ್ಲಿ ಹೀಗೆ ನಗು ಇತ್ತು.” ಒಬ್ಬ ಬಾಲಕ ಕುಣಿಯುತ್ತಾ ವೇದಿಕೆಯ ಹಿಂದಕ್ಕೆ ಬರುತ್ತಾನೆ.ಅಜ್ಜ, ನೀವು ಏಕೆ ಇಲ್ಲೇ ಕುಳಿತಿದ್ದೀರಾ? ಮುಂದೆ ಹೋಗಿ ನೋಡಿ!” ಅಜ್ಜ ಸ್ವಲ್ಪ ಮುಜುಗರದಿಂದ ನಗುತ್ತಾನೆ.

“ನಾನು ನೋಡೋದು ಸಾಕಪ್ಪಾ… ಇದು ನನ್ನ ಕೆಲಸದ ಜಾಗ…”ಆ ಬಾಲಕ ಕೈ ಹಿಡಿದು ಎಳೆಯುತ್ತಾನೆ. ಕೆಲಸ ನಂತರ ಮಾಡಬಹುದು… ಈಗ ನೀವು ಕೂಡ ಸ್ವಲ್ಪ ಬದುಕಿ ನೋಡಿ…”ಅಜ್ಜ ನಿಧಾನವಾಗಿ ಎದ್ದು… ಮೊದಲ ಬಾರಿಗೆ ವೇದಿಕೆಯ ಬೆಳಕಿನ ಕಡೆ ಹೆಜ್ಜೆ ಹಾಕುತ್ತಾನೆ. ಆ ಬೆಳಕು ಅವರ ಮುಖದ ಮೇಲೆ ಬೀಳುತ್ತಾ…ಅವರ ಕಣ್ಣಲ್ಲಿ ನೀರು ಮಿನುಗುತ್ತಿದೆ. ಅವರು ಕುಣಿಯಲಿಲ್ಲ. ಆದರೆ ಅವರ ಹೃದಯ ಕುಣಿಯಿತು. ಆ ರಾತ್ರಿ…ಸ್ವಚ್ಛತೆ ಮಾಡುವ ಕೈಗಳು ಮೊದಲ ಬಾರಿಗೆ ಸಂತೋಷವನ್ನು ಮುಟ್ಟಿದವು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ