ಅವರ ಬದುಕಿನಲ್ಲಿ ನೋವಿಲ್ಲದೇನಲ್ಲ ಆದರೆ ಅದನ್ನ ಎಲ್ಲೂ ತೋರಿಸಿಕೊಳ್ಳದೆ ಹಂಚಿಕೊಳ್ಳದೇ ಎಲ್ಲರೊಂದಿಗೆ ಸಂತಸವನ್ನೇ ದಾಟಿಸುವ ಪುಟ್ಟ ಜೀವಗಳು, ದೇಹ ವಯಸ್ಸಿನೊಂದಿಗೆ ಮಾಗಿದೆ. ಬದುಕಿನಲ್ಲಿ ಹೊಸ ಆಸೆಗಳೇನೂ ಇಲ್ಲ ಇದ್ದ ಬದುಕನ್ನ ನೆಮ್ಮದಿಯಿಂದ ಸಾಗಿಸಬೇಕೆನ್ನುವುದೇ ಆಸೆ. ಅವರೊಂದಿಗೆ ಕಳೆದ ಕೆಲವು ಕ್ಷಣಗಳು ಬದುಕನ್ನ ಇನ್ನಷ್ಟು ಪ್ರೀತಿಸಲು ಪ್ರೇರೇಪಿಸುತ್ತದೆ. ಹಾಗೇ ಊರ ಮದ್ಯದಲ್ಲಿ ಪುಟ್ಟ ಮನೆಯಲ್ಲಿ ಬದುಕುತ್ತಿರುವ ಹಿರಿಯ ಜೀವಗಳು ಇನ್ನಷ್ಟು ಸಂತೋಷ ಹಂಚಲು ಕಾಯುತ್ತಿವೆ, ಒಮ್ಮೆ ಭೇಟಿಯಾಗಿ ಬದುಕಿನಾಸೆಯಿಂದ ತುಂಬಿಸಿ ಹೊರಡಬೇಕಷ್ಟೇ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!