ಪರಿಧಿಯನ್ನು ವಿಸ್ತರಿಸಬೇಕು ಹಾಗೆ ವಿಸ್ತರಿಸ್ತಾ ಹೋದಹಾಗೆ ನಾವ್ಯಾರು ನಾವೇನು ಅನ್ನೋದು ಅರ್ಥವಾಗುತ್ತೆ. ಹೆಚ್ಚಾಗಿ ನಮ್ಮ ಸುತ್ತಮುತ್ತ ಸಣ್ಣದೊಂದು ಪರಿಧಿಯನ್ನು ಹಾಕಿಕೊಂಡು ನಾವೇನೋ ಅದ್ಭುತ ಸಾಧಕರು ಅಂದುಕೊಳ್ಳುತ್ತೇವೆ. ಒಳ್ಳೆಯದು ಮಾಡ್ತಾ ಇದ್ದೇವೆ, ಖಂಡಿತವಾಗಿಯೂ ತುಂಬಾ ದೂರ ತಲುಪುತ್ತೇವೆ ಅಂದುಕೊಳ್ಳುತ್ತೇವೆ, ಒಂದು ಸಲ ಆ ಪರಿಧಿಯನ್ನು ಸ್ವಲ್ಪ ದೊಡ್ಡದು ದೊಡ್ಡದು ಮಾಡ್ತಾ ಹೋದ ಹಾಗೆ ನಾವೇನು? ನಾವು ಯಾರಿಗೂ ತಿಳಿದಿಲ್ಲ ನಮ್ಮಿಂದ ಅಷ್ಟು ಸುಲಭವಾಗಿ ಅದು ಸಾಧ್ಯವಾಗುವುದಿಲ್ಲ ಇದೆಲ್ಲವೂ ಅರ್ಥವಾಗುವುದಕ್ಕೆ ಸಾಧ್ಯ ಆಗುತ್ತೆ. ಹಾಗೆ ದೊಡ್ಡ ದೊಡ್ಡ ಪರಿಧಿಯಲ್ಲಿ ಕೂಡ ನಾವು ಗುರುತು ಪರಿಚಯ ಸಿಗ್ತವೆ ಅಂತಾದರೆ ಮಾತ್ರ ನಾವು ಮಾಡುತ್ತಿರುವ ಕೆಲಸಗಳು ಹೆಚ್ಚು ಜನರಿಗೆ ತಲುಪಿದೆ ಅಂತ ಅರ್ಥ. ಹಾಗಾಗಿ ಪರಿಧಿಯನ್ನು ವಿಸ್ತರಿಸಿಕೊಂಡು ನಿನ್ನ ಗುರುತನ್ನ ಅಲ್ಲಿ ಕಟ್ಟಿಕೋ... ಹೀಗಂತ ಅಂದವರು ನನ್ನನ್ನ ತುಂಬಾ ಹತ್ತಿರದಿಂದ ಕಂಡವರೇ, ಅವರು ಹೀಗೆ ಹೇಳುವುದಕ್ಕೆ ಯಾವುದೋ ಬಲವಾದ ಕಾರಣವಿದ್ದಿರಬೇಕು ಕಾರಣ ಕೇಳೋಕೆ ಹೋಗದೇ ಪರಿಧಿ ವಿಸ್ತರಣೆ ಕಾರ್ಯದಲ್ಲಿ ತೊಡಗಿಕೊಂಡೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ