ಅವಳು ಮಗುವಂತಾಡುತ್ತಾಳೆ, ವಯಸ್ಸು ಬೆಳೆದಿದೆ ಬದುಕಿನ ಎಲ್ಲ ಆಲೋಚನೆಗಳು ಗೊತ್ತಿದೆ, ಎಲ್ಲಾ ಕಡೆಯೂ ಪ್ರಬುದ್ಧಳಾಗಿರುವವಳು ತನ್ನವನ ಮುಂದೆ ಮಾತ್ರ ಮಗುವಂತಾಡುತ್ತಾಳೆ, ಹಠ ಮಾಡುತ್ತಾಳೆ, ರಂಪಾಟ ಕಿರುಚಾಟ ನಡೆಸುತ್ತಾಳೆ, ಮತ್ತೆ ಮುದ್ದಾಗಿ ಮಾತನಾಡುತ್ತಾಳೆ. ಅವಳಿಗೆ ಯಾರೊಂದಿಗೂ ಈ ಭಾವವಿಲ್ಲ ತನ್ನವನೊಂದಿಗೆ ಮಾತ್ರ ಹೀಗಿರುತ್ತಾಳೆ, ಬದುಕು ಅರ್ಥವಾಗುವ ಮೊದಲೇ ಜವಬ್ದಾರಿಗಳು ತಲೆಯಮೇಲೇರಿ ಬದುಕನ್ನ ಆಸ್ವಾದಿಸುವ ಅವಕಾಶ ಕಳೆದುಕೊಂಡಿದ್ದಳು. ಈಗ ಮನಸ್ಸನ್ನ ಅರ್ಥೈಸುವ ಜೊತೆಗಾರ ಸಿಕ್ಕ ಮೇಲೆ ತಲೆಯ ಭಾರ ಕಡಿಮೆ ಆಗಿದೆ ಬದುಕನ್ನ ಪ್ರೀತಿಸುವ ಅವಕಾಶ ಸಿಕ್ಕಿದೆ ಅದಕ್ಕೆ ಮಗುವಂತಾಡುತ್ತಾಳೆ, ಅಷ್ಟೇ ಮತ್ತೇನಿಲ್ಲ... ತಪ್ಪು ತಿಳಿಯಬೇಡಿ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ