ಹಿಂದೆ 185 ನೇ ಸಂಖ್ಯೆಯ ಅಡಿ ಅಂದಾಜ್ ಚಿತ್ರದ ಈ ಹಾಡಿನ ಕೆಲವು ಸಾಲುಗಳನ್ನು ಅದೇ ಧಾಟಿಯಲ್ಲಿ ಹಾಡಲು ಬರುವಂತೆ ಅನುವಾದಿಸಿದ್ದೆ . ಈಗ ಅದರ ಪೂರ್ತಿ ಅನುವಾದ ಇದೋ ಇಲ್ಲಿದೆ.

 

 

ಬಾಳಿದು ಸುಂದರ ಪಯಣ 

ನಾಳೆ ಏನೆಂದು ಯಾರಿಗ್ಗೊತ್ತು

 

ಚಂದ್ರ ತಾರೆಯರ ದಾಟಿ ಹೋಗ್ಬೇಕು

ಬಾನ ದಿಗಂತಾನೂ ಹಿಂದೆ ಬಿಡ್ಬೇಕು

ಹಿಂದೇನೆ ಉಳಿಯೋದು ಈ ಪ್ರಪಂಚ

ನಾಳೆ ಏನೆಂದು ಯಾರಿಗ್ಗೊತ್ತು ll ೧ ll

 

ನಗುತಾ ಹಾಡ್ತಾ ಇಲ್ಲಿಂದ ನಡಿ

ಲೋಕ ಏನನ್ನತ್ತೆ ಚಿಂತೆ ಮಾಡ್ಬೇಡ

ಮುಗುಳು ನಗ್ತಾನೇ ಕಳಿ ಆಯುಷ್ಯ

ನಾಳೆ ಏನೆಂದು ಯಾರಿಗ್ಗೊತ್ತು ll ೨ ll

 

ಸಾವು ಒಂದಿನ ಬಂದೇ ಬರ್ತದೆ

ಜೀವ ಒಂದಿನ ಹೋಗೇ ಹೋಗ್ತದೆ

ಇಂಥ ಮಾತಿಂದ ಗಾಬರಿ ಏಕೆ?

ನಾಳೆ ಏನೆಂದು ಯಾರಿಗ್ಗೊತ್ತು ll ೩ ll