ಛೇ, ಬದುಕು ಇಲ್ಲಿಗೆ ತಂದು ನಿಲ್ಲಿಸಿ ಬಿಟ್ಟಿದೆ. ಬೀದಿ ಬೀದಿ ತಿರುಗಾಡಿ ಯಾರಿಗಾದರೂ ಮನೆ ಬಾಡಿಗೆಗೆ ಬೇಕಾದರೆ ಸಂಪರ್ಕಿಸಿ, ಸೈಟುಗಳು ಕೊಳ್ಳುವವರಿದ್ದರೆ ವಿಚಾರಿಸಿ ಹೀಗೆ ಕರಪತ್ರಗಳನ್ನ ಹಂಚಬೇಕಾಗಿದೆ. ಈ ಕರಪತ್ರಗಳನ್ನು ನೋಡಿ ಯಾರಾದರೂ ಕೊಳ್ಳುವವರು ಬಂದುಬಿಟ್ಟರೆ ನಮ್ಮ ತಿಂಗಳ ಸಂಬಳ ಬಂದಂತೆ. ಬಾರದೆ ಹೋದ್ರೆ ಉಪವಾಸ ಒಂದೇ ನಮ್ಮ ಜೊತೆಗಾರನಾಗಿರುತ್ತಾನೆ. ಬದುಕು ಹೀಗೆ ಇರಲಿಲ್ಲ. ತುಂಬಾ ಶ್ರೀಮಂತರಂತೆ ನಾವು ಅಜ್ಜ ತಾವು ಕಷ್ಟಪಟ್ಟು ಕೃಷಿ ಭೂಮಿಯನ್ನು ಸಂಪಾದಿಸಿದರು. ಅಪ್ಪನಿಗೆ ಯಾಕೋ ಕುಡಿತದ ಚಟ ಹತ್ತಿತು. ತನ್ನ ಸಣ್ಣ ಪುಟ್ಟ ಸಾಲಕ್ಕೆ ಮನೆಯ ನೆಲ ಒಂದನ್ನ ಬಿಟ್ಟು ಎಲ್ಲವನ್ನು ಮಾರಾಟ ಮಾಡಿಬಿಟ್ಟ ಅಮ್ಮನ ಆರೋಗ್ಯ ಕೆಟ್ಟಾಗ ಅದನ್ನು ಮಾರಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು. ಅಪ್ಪ ಮಾರಿದ್ದು ಮಾತ್ರ. ಆದರೆ ಅದರ ಬೆಲೆ ಕಟ್ಟುತ್ತಾ ಇರೋನು ನಾನು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ