ಇದರಲ್ಲಿ ಅಪ್ಪನದು ಏನೂ ತಪ್ಪಿಲ್ಲ. ದಯವಿಟ್ಟು ಅಪ್ಪನನ್ನ ದೂಷಿಸಬೇಡಿ. ಅವರಿಗೆ ಈ ತಿಂಗಳಂತ್ಯಕ್ಕಾಗುವಾಗ ಕಟ್ಟಬೇಕಾದ ಮನೆಯ ಸಾಲಕ್ಕೆ ಹಣ ಹೊಂದಾಣಿಕೆ ಕೆಲಸದ ಒತ್ತಡ ಮನೆಯಲ್ಲಿ ಕಿರಿಕಿರಿ, ಸುತ್ತಮುತ್ತಲಿನವರು ಮಾತನಾಡುವ ರೀತಿ, ಗೆಳೆಯರ ಕುಹಕದ ಮಾತು, ಇದೆಲ್ಲವನ್ನು ತಲೆಯೊಳಗೆ ತುಂಬಿಕೊಂಡು ತುಂಬಿಕೊಂಡು ತಾವು ಮಾಡುತ್ತಿದ್ದ ಕೆಲಸದ ಬಗ್ಗೆ ಯೋಚನೆ ಇರಲಿಲ್ಲ. ಹಾಗಾಗಿ ಮನೆಯ ನೀರಿನ ಟ್ಯಾಂಕಿನ ಬಾಗಿಲನ್ನು ತೆರೆದಿಟ್ಟು ಅವರ ಗಾಡಿಯನ್ನು ತೊಳಿತಾ ಇದ್ರು, ಆ ಗಾಡಿಯನ್ನು ತೊಳೆಯುವಾಗಲೂ ಕೂಡ ಅವರ ಮನಸ್ಸಲ್ಲಿ ಸರಿಯಾದ ಯೋಚನೆಗಳು ಓಡುತ್ತಾನೂ ಇರಲಿಲ್ಲ. ಹಾಗಾಗಿ ನನ್ನ ಕಡೆ ಗಮನ ಕೊಡುವುದಕ್ಕೆ ಆಗಲಿಲ್ಲ ನಾನದೇನೋ ಹೊಸತು ಅಂದುಕೊಂಡು ಅಂಗಳದಲ್ಲಿ ಓಡಾಡುತ್ತಿದ್ದವ ಆ ನೀರಿನ ಟ್ಯಾಂಕಿನೊಳಗೆ ಬಿದ್ದುಬಿಟ್ಟೆ. ಪುಟ್ಟ ದೇಹವಾದ ಕಾರಣ ನನ್ನ ಸ್ವರ ಮೇಲೆ ಕೇಳಲಿಲ್ಲ ನೀರು ನನ್ನ ಒಳಗೆ ಎಳೆದುಕೊಳ್ಳುತ್ತ ಹೋಯಿತು ದೇಹ ವಿಲವಿಲ ಒದ್ದಾಡಿ ನೀರು ಹೊಟ್ಟೆಯೊಳಗೆ ಇಳಿದು ಗಾಳಿಗೆ ಪ್ರವೇಶವಾಗುವುದಕ್ಕೆ ಆಗದೆ ಉಸಿರು ನಿಲ್ಲಿಸಿದೆ.ಇದರಲ್ಲಿ ಅಪ್ಪನ ತಪ್ಪೇನು ಇಲ್ಲ ನಾನೇ ದಾರಿ ತಪ್ಪಿ ಉಸಿರು ನಿಲ್ಲಿಸಿದ್ದೇನೆ ಅಪ್ಪನಿಗೆ ಯಾರು ಬೈಬೇಡಿ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ