"ತಿಂಗಳ ಬೆಳಕು" ಕವಿ ಉಮೇಶ,
ನಿಮ್ಮ "ಮೌನದೊಳಗಿನ ಮಾತು" ಓದಿದೆ.
ನಿಮಗೆ ಆ ರೀತಿ ಪ್ರೀತಿ.
ಹಾಗೆಂದೇ ಅದರ ಕುರಿತು ಮಾತು ಮೌನದೊಳಗಿದೆ.ನನ್ನ ಮಾತು ಮೌನದೊಳಗಿದೆ.
ಆದರೆ ನಿಮ್ಮ " ತಿಂಗಳ ಬೆಳಕು " ಮಾತ್ರ ಮೌನದೊಳಗಿರಲು ಬಿಡುವುದಿಲ್ಲ.ಬಿಡಲಿಲ್ಲ.
ಕವಿ ಸಾಮಾನ್ಯನಲ್ಲ. ಸಾಮಾನ್ಯ ಸಂಗತಿಗಳಿಗೆ ತಲೆ ಕೊಡುವುದಿಲ್ಲ. ಲೋಕದ ಎಲ್ಲೆಡೆಯೂ ಓಡಾಡುತ್ತಾನೆ. ಒಳಗೊಳಗೆ ಹೊಕ್ಕುತ್ತಾನೆ.ಯಾವುದು ವಂದ್ಯ, ಯಾವುದು ನಿಂದ್ಯ - ಅವುಗಳನ್ನು ಹೆಕ್ಕುತ್ತಾನೆ.. ಅನಂತರ ಒಂದೊಂದನ್ನೂ ಕಣ್ಣ ಮುಂದಿಡುತ್ತಾನೆ.
ಕನ್ನಡದಲ್ಲಿ ಹನಿಗವನ ಪ್ರಕಾರ ಕೂಡ ಸ್ಥಾನ - ಮಾನ ಪಡೆದಿದೆ. ಇಲ್ಲಿ ಒಂದೇ ವಸ್ತುವನ್ನು ಪ್ರಧಾನವಾಗಿಸಿಕೊಂಡು ಕೆಲವಾರು, ಹಲವಾರು ಕವನಗಳನ್ನು ರಚಿಸಲಾಗಿದೆ.
ಶಾ.ಬಾಲುರಾವ್, ಮಳಲಿ ವಸಂತಕುಮಾರ, ಗುಂಡ್ಮಿ ಚಂದ್ರಶೇಖರ ಐತಾಳ, ಅಮೃತ ಸೋಮೇಶ್ವರ, ವೈದೇಹಿ, ವಿ.ಗ.ನಾಯಕ ಮೊದಲಾದವರು ಹತ್ತಿಪ್ಪತ್ತೋ,ಐವತ್ತೋ, ನೂರೋ ನೋಟಗಳನ್ನು ಕೊಡಮಾಡಿದ್ದಾರೆ. ಇದೀಗ ನೀವು ಅವರ ಸಾಲಿನಲ್ಲಿ ಕಾಣಿಸಿಕೊಂಡಿದ್ದೀರಿ. "ತಿಂಗಳ ಬೆಳಕು" ಅಲ್ಲಿ ಚಂದ್ರನನ್ನು - ಅವನ ಆಟೋಟ ಮಾಟಗಳನ್ನು ನೂರು ರೀತಿಯಲ್ಲಿ ಹಿಡಿದು ಕೊಟ್ಟಿದ್ದೀರಿ.
ಸಂಕಲನದಲ್ಲಿನ ೧, ೨, ೪, ೭, ೧೦, ೧೨, ೧೩, ೧೪, ೧೭, ೧೮, ೧೯, ೨೦, ೨೧, ೨೨, ೨೫, ೨೬, ೨೭, ೨೮ ,೩೦, ೩೧, ೩೨ ,೩೩, ೩೯, ೪೯, ೪೯ ,೫೪, ೫೭, ೬೧, ೬೨ ,೬೪, ೬೫, ೬೮, ೭೩, ೭೪, ೭೬, ೭೭,೮೦, ೮೨, ೮೧, ೮೩, ೮೬ ,೮೮, ೮೯, ೯೦, ೯೧, ೯೭, ೯೯, ೧೦೦ - ಇಷ್ಟು ರಚನೆಗಳು ಅಲ್ಲ ಕವನಗಳು ಹೆಚ್ಚು ಅಚ್ಚು ಮೆಚ್ಚಾದವು.
ಇನ್ನುಳಿದವು ಅಲ್ಲ, ಅಲ್ಲ ಅಂತಲ್ಲ. ಆದರೂ ಸೋತಂತಿವೆ ಅಲ್ಲವೇ? ಹೀಗೂ ಅಂದುಕೊಳ್ಳುತ್ತಿದ್ದೇನೆಯೇ? ಏನು ಆಗಬೇಕಿತ್ತು ಎಂದರೆ.ರಚನೆಗಳ ಮರು ಓದು, ಮರು ಓದು. ಆವಾಗ ಎಷ್ಟೋ ರಚನೆಗಳಿಗೆ ರೂಪಾಂತರಗಳು, ಪುನರ್ಜನ್ಮಗಳು ಪ್ರಾಪ್ತವಾಗಿಬಿಡುತ್ತಿದ್ದವು.
(ನಾನು " ಗೋಲಗುಮ್ಮಟ" ದಲ್ಲಿ ೬೮, " ನೆಲಗುಮ್ಮ " ದಲ್ಲಿ ೧೦೦ ಹಾಕಿಕೊಂಡಿದ್ದೇನೆ. ಹೆಚ್ಚೇ ಬರೆದಿದ್ದೆ. ಮತ್ತೆ, ಮತ್ತೆ ಓದಿದಾಗ ಏನಾಯಿತು? ಎಷ್ಟೋ ಬೇಡವಾಯಿತು. ಬಿಟ್ಟು ಬಿಟ್ಟೆ)
ಹೌದು " ತಿಂಗಳ ಬೆಳಕು " ಗಮನಾರ್ಹವಾದ ಸಂಕಲನವಾಗಿದೆ. ಅಲ್ಲಲ್ಲಿ ಪ್ರತಿಭೆ ಪ್ರವೇಶಿಸಿದೆ. ಕೆಲವಾರು ರಚನೆಗಳಲ್ಲಿ ವಿಶೇಷತೆ, ವಿಶಿಷ್ಟತೆಗಳಿವೆ, ವೈವಿಧ್ಯ, ವೈಚಿತ್ರ್ಯಗಳೂ ಇವೆ.
ಇನ್ನಷ್ಟು, ಮತ್ತಷ್ಡು ಬೆಳೆಯಿರಿ, ಬೆಳಗಿರಿ.
ನಿಮ್ಮ
ವಿ.ಗ.ನಾಯಕ
೧೦-೧-೨೦೨೪
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನೃತ್ಯ ವಿದ್ವತ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಅವನಿ ಕೋಡಿಬೈಲು
ಅಂಜನಾದ್ರಿ ಬೆಟ್ಟದ ಮೆಟ್ಟಿಲುಗಳಲ್ಲಿ ಅರಳಿದ ಭಕ್ತಿ ಮತ್ತು ಭಾವನೆ!
ನನ್ನ ಬೆಳಕು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!