ಪ್ರೀತಿಯುಸಿರಲಿ ನಿನ್ನನು ಸಲಹುತ ಬಂದಿರುವೆ ಚೆಲುವೆ
ಎದೆಗೆ ಸುಡುವ ಬೆಂಕಿಯ ಇಡದಿರು ಎಂದಿರುವೆ ಚೆಲುವೆ
ಪ್ರೇಮವು ಸಾಕು ಬಾಳಿನ ತುಂಬ ನಲಿವ ಚೆಲುವು ಬೇಕೆ
ದಾರಿಯು ತಪ್ಪದಿರಲು ದೂರಕೆ ಹೋಗದಿರುವೆ ಚೆಲುವೆ
ಸಿಂಗಾರ ಭಾವಕೆ ಚಂದ್ರನ ಬೆಳಕು ಹೀಗೆ ಸದಾ ಚೆಲ್ಲಿದೆ
ಪ್ರೀತಿಯ ವಿರಹವಿದ್ದರೂ ಸಿಡುಕಿ ಸಾಗದಿರುವೆ ಚೆಲುವೆ
ಮನದೊಡತಿ ನೀನೇ ಕನಸಿನಲೂ ಹೇಳಿರುವೆ ನಾನಿಂದು
ಸ್ಪೂರ್ತಿ ಶೃಂಗಾರದ ನವರಸವನು ತುಂಬಿರುವೆ ಚೆಲುವೆ
ಹುಣ್ಣಿಮೆ ತಾರೆಯ ಸಂಗ ಬಾಳಲಿ ಹೀಗೆ ತುಂಬಿರಲಿ ಈಶ
ಸರಸ ಸಲ್ಲಾಪದ ಕಲೆಗೆ ಸವಿಯ ಜೇನಾಗಿರುವೆ ಚೆಲುವೆ
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!